ಸಮಗ್ರ ನ್ಯೂಸ್: ಇತ್ತಿಚೇಗೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 2 ಚಿರತೆಗಳು ಸಾವನ್ನಪ್ಪಿದ್ದವು. ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ನಿಂದ ಸೋಂಕು ತಗುಳಿ 2 ಚಿರತೆಗಳು ಸಾವನಪ್ಪಿದೆ ಎಂದು ತಿಳಿದು ಬಂದಿದೆ.
ಕಳೆದ ಮಂಗಳವಾರ ತೇಜಸ್ ಹಾಗೂ ಶುಕ್ರವಾರ ಸೂರಜ್ ಎಂಬ ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದ್ದವು. ತೇಜಸ್ ಕೆಲ ದಿನಗಳ ಹಿಂದೆ ಹೆಣ್ಣು ಚೀತಾಗಳೊಂದಿಗೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಅದು ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು, ಮತ್ತು ಅದರ ಕತ್ತಿನ ಸುತ್ತ ಆಗಿದ್ದ ಸೋಂಕು ಕೂಡಾ ಅದರ ಸಾವಿಗೆ ಕಾರಣ ಎಂಬುದು ಕಂಡು ಬಂದಿದೆ.
ತೇಜಸ್ ಹಾಗೂ ಸೂರಜ್ ಎರಡೂ ಚಿರತೆಗಳ ಕತ್ತಿನ ಸುತ್ತಲೂ ರೇಡಿಯೋ ಕಾಲರ್‌ಗಳಿಂದಾಗಿ ಸೋಕು ಉಂಟಾಗಿದ್ದು, ಅದರ ಗಾಯಗಳಿಂದಾಗಿ ಅವು ಸಾವನ್ನಪ್ಪಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೀಗ ರೇಡಿಯೋ ಕಾಲರ್ ಅಳವಡಿಸಿರುವ ಚಿರತೆಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.