ಸಮಗ್ರ ನ್ಯೂಸ್: ದಿನೇ ದಿನೇ ಟೊಮೆಟೋ ಬೆಲೆಯಲ್ಲಿ ಏರಿಕೆ ಕಾಣತೊಡಗಿದೆ. ಶೀಘ್ರದಲ್ಲೇ ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎನ್ನಲಾಗುತ್ತಿತ್ತು. ಆದರೆ ಸದ್ಯಕ್ಕೆ ಬೆಲೆ ಇಳಿಕೆ ಆಗಲ್ಲ. ಇನ್ನೂ ಕೇಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ.
ದೇಶದೆಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿದೆ. ಮುಂಬರುವ ದಿನಗಳಲ್ಲಿ ಒಂದು ಕೇಜಿಗೆ 300 ರೂ ತಲುಪುವ ಸಾಧ್ಯತೆ ಇದೆ ಎಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಟೊಮೆಟೋ ಬೆಲೆ ಹೆಚ್ಚಳಕ್ಕೆ ಉತ್ತರ ಭಾರತದಲ್ಲಿ ಸುಳಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯವೇ ಕಾರಣವಾಗಿದೆ.
ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದ್ದರ ಪರಿಣಾಮವೂ ಬೆಲೆ ಏರಿಕೆಯ ಹಿಂದಿದೆ. ಇನ್ನೂ ಕೆಲ ಪ್ರದೇಶಗಳಲ್ಲಿ ಬರದಿಂದಾಗಿ ಕೈಗೆ ಬಂದ ಫಸಲು ಹಾಳಾದ ಕಾರಣದಿಂದಲೂ ಟೊಮೆಟೋ ದರ ದುಬಾರಿಯಾಗಿದೆ.
ಹೀಗಾಗಿ ಸದ್ಯಕ್ಕೆ ಟೊಮೆಟೋ ಬೆಲೆ ಇಳಿಕೆ ಆಗಲ್ಲ, ಇನ್ನೂ 300 ರೂವರೆಗೆ ಕೇಜಿಗೆ ಏರಿಕೆಯಾಗುವ ಸಂಭವವಿದೆ ಎಂಬುದಾಗಿ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.