ಮಂಗಳೂರು: ಪಣಂಬೂರು ಎನ್‌ಎಂಪಿಟಿ ಬಂದರಿನಲ್ಲಿ ಹಡಗಿನಿಂದ ಅದಿರು ಹೊತ್ತೊಯ್ಯಲು ಬಂದಿದ್ದ ಟಿಪ್ಪರ್ ಸಹಿತ ಚಾಲಕ ಮತ್ತು ನಿರ್ವಹಾಕ ಸಮುದ್ರಪಾಲದ ಘಟನೆಯಲ್ಲಿ ಚಾಲಕನ ಶವ ನಿನ್ನೆ ರಾತ್ರಿ ಪತ್ತೆಯಾದರೆ ನಿರ್ವಾಹಕನ ಶವ ಇಂದು ಸಂಜೆ ಪತ್ತೆಯಾಗಿದೆ.
ಡೆಲ್ಟಾ ಕಂಪನಿಗೆ ಸೇರಿದ ಟ್ರಕ್ ಜೂ.20 ರ ರಾತ್ರಿ 10:30 ರ ಸುಮಾರಿಗೆ ಹಡಗಿನಿಂದ ಕಬ್ಬಿಣದ ಅದಿರು ಅನ್ಲೋಡ್ ಮಾಡಿ ತುಂಬಿಸಿಕೊಳ್ಳಲು 14ನೇ ಬರ್ತ್ ಗೆ ಬಂದಿತ್ತು. ಆದರೆ ಖಾಲಿಯಿದ್ದ ಟ್ರಕ್ ಅಕಸ್ಮಾತ್ ಸಮುದ್ರಕ್ಕೆ ಬಿದ್ದು ಮುಳುಗಿದ್ದು ಅದರಲ್ಲಿದ್ದ ಚಾಲಕ ಮತ್ತು ಕ್ಲೀನರ್ ನೀರಿನಲ್ಲಿ ಮುಳುಗಿದ್ದಾರೆ. ಇದೇ ವೇಳೆ ಅಲ್ಲಿಂದ ಪಾಸ್ ಆಗಿದ್ದ ಟಗ್ ಬೋಟಿನ ಸಿಬ್ಬಂದಿ ಲಾರಿ ಮುಳುಗಿದ್ದನ್ನು ಕಂಡು ಬಂದರಿನ ರಕ್ಷಣಾ ವಿಭಾಗಕ್ಕೆ ಮಾಹಿತಿ ನೀಡಿದ್ದರು. ಉತ್ತರ ಭಾರತ ಮೂಲದ ಚಾಲಕ ರಾಜೇಸಾಬ್ (25) ಮತ್ತು ಇನ್ನೊಬ್ಬ ಕ್ಲೀನರ್ ಭೀಮಪ್ಪ (22) ಈ ವೇಳೆ ಲಾರಿಯಲ್ಲಿದ್ದರು.
ಕೂಡಲೇ ಲಾರಿ ನೀರಿಗಿಳಿದ ಘಟನೆಯ ಬಗ್ಗೆ ಸಿಐಎಸ್‌ಫ್ ಗೆ ಮಾಹಿತಿ ನೀಡಲಾಗಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ. 11:50ರ ವೇಳೆಗೆ ಒಬ್ಬನನ್ನು ಮೇಲಕ್ಕೆತ್ತಿ ತಕ್ಷಣ ನಗರದ ಎಜೆ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಬಳಿಕ ಇನ್ನೋರ್ವ ನಿರ್ವಾ
ಹಕ ಭೀಮಪ್ಪನಿಗಾಗಿ ಕಾರ್ಯಾಚರಣೆ ಮುಂದುವರೆದಿತ್ತು. ರಾತ್ರಿ ವೇಳೆ ಶವ ಪ್ತತೆ ಯಾಗದ ಕಾರಣ ಮುಂಜಾನೆ ಮತ್ತೆ ಕಾರ್ಯಾಚರಣೆ ಮುಂದುವರೆದಿತ್ತು. ಇದೀಗ ಸಂಜೆ ವೇಳೆ ಟಿಪ್ಪರ್‌ನ್ನು ಸಮುದ್ರದ ಆಳದಿಂದ ಹೊರ ತೆಗೆಯಾಲಾಗಿದೆ. ಇದೇ ವೇಳೆ ನಿರ್ವಹಾಕನ ಶವ ಟಿಪ್ಪರ್ ಮುಂಬಾಗದ ಸೀಟ್‌ನಲ್ಲಿ ಮಳಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಭೀಮಪ್ಪ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಟ್ರಕ್ ಸಿಬ್ಬಂದಿಯಾಗಿದ್ದ. ರಾತ್ರಿ ವೇಳೆಗೆ ಅನ್ಲೋಡಿಂಗ್ ಕೆಲಸ ಆಗುತ್ತಿತ್ತೇ ಅಥವಾ ಯಾಕೆ ಟ್ರಕ್ ಅಷ್ಟು ತೀರಕ್ಕೆ ಬಂದಿತ್ತು. ಬಂದರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಆಗಿದೆಯೇ ಎನ್ನುವ ಬಗ್ಗೆ ಪಣಂಬೂರು ಪೊಲೀಸರು ತನಿಖೆ ನಡೆಸಬೇಕಾಗಿದೆ.