ಸಮಗ್ರ ನ್ಯೂಸ್: ಬೆಂಗಳೂರು ನಗರದಲ್ಲಿ ಪ್ರದಕ್ಷಿಣೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದಿರಾ ಕ್ಯಾಂಟೀನ್ ಅವ್ಯವಹಾರಗಳನ್ನೂ ರಿಪೇರಿ ಮಾಡ್ತೀನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಪ್ರದಕ್ಷಿಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಯಾವ ಅಧಿಕಾರಿಗಳಿಗೂ ತಿಳಿಸದೆ ನಗರ ಪ್ರದಕ್ಷಿಣೆ ಮಾಡಿದ್ದೀನಿ. ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ಮಾಡಿದ್ದೀನಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡ್ತಿಲ್ಲ. ಕೆಲವರು ಕಸವನ್ನು ಪುಟ್‌ಪಾತ್‌ನಲ್ಲೇ ಡಂಪ್ ಮಾಡ್ತಿದ್ದಾರೆ. ಅದನ್ನ ಕಮಿಷನರ್‌ಗೆ ತೋರಿಸಿದ್ದೇನೆ. ಇದರ ಜವಾಬ್ದಾರಿ ಯಾರದ್ದು ಅನ್ನೋದನ್ನ ಫಿಕ್ಸ್ ಮಾಡಬೇಕಿದೆ. ಕಸವನ್ನು ಯಾರು ಡಂಪ್ ಮಾಡ್ತಾರೆ ಅನ್ನೋದನ್ನ ಗಮನಿಸಬೇಕು. ತೂಕದಲ್ಲೂ ವ್ಯತ್ಯಾಸ ಇದೆ. ಬಿಲ್ ನೋಡಬೇಕಿದೆ. ಕೆಲವು ಲೆಕ್ಕವನ್ನು ನೋಡಿದ್ದೇನೆ ಎಂದು ಹೇಳಿದರು.
ಇನ್ನು ಇಂದಿರಾ ಕ್ಯಾಂಟಿನ್‌ಗೆ ಹೋಗಿದ್ದೆ, ಅಲ್ಲಿ ಆಹಾರ ಖಾಲಿ ಆಗಿತ್ತು , ಕೆಲವು ಕಡೆ ಐದು ರೂಪಾಯಿಗೆ ಹತ್ತು ರೂಪಾಯಿ ಸಂಗ್ರಹಿಸ್ತಿದ್ದಾರೆ. ಬಹಳ ವರ್ಷದಿಂದ ಹೀಗೆ ನಡೆಯುತ್ತಿದೆ. ಎಲ್ಲವನ್ನೂ ರಿಪೇರಿ ಮಾಡ್ತೀನಿ. ಇಲ್ಲಿಯವರೆಗೆ ಕಿವಿಯಲ್ಲಿ ಕೇಳಿದ್ದೆ. ಇದೀಗ ಕಣ್ಣಾರೆ ಕಂಡಿದ್ದೀನಿ. ಇದಕ್ಕೆಲ್ಲ ಒಂದು ಫುಲ್ ಸ್ಟಾಪ್ ನಾನೇ ಇಡುತ್ತೀನಿ ಎಂದು ಹೇಳಿದರು.