ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಜಿಲ್ಲಾಡಳಿತ ಭವನದ ತಡೆಗೋಡೆಯ ಕಾಮಗಾರಿಯ ಬಗ್ಗೆ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದೆ.
ಸದನದಲ್ಲಿ ತಡೆಗೋಡೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಮಂತರ್ ಗೌಡ ಕಾಮಗಾರಿಕ್ಕೆ ತಂತ್ರಜ್ಞಾನ ಸರಿಯಾಗಿ ಬಳಸಿಲ್ಲ ಅಪಾಯಕಾರಿ ಸ್ಥಿತಿಯಲ್ಲಿದ ತಡೆಗೋಡೆಯನ್ನು ತೆರೆವು ಮಾಡಿ ಮತ್ತೆ ಜೋಡಣೆ ಮಾಡಲಾಗುತ್ತಿದೆ ಗುಡ್ಡ ಕುಸಿಯುವ ಜೊತೆಗೆ ಜಿಲ್ಲಾಡಳಿತ ಕಟ್ಟಡವು ಕೂಡ ಕುಸಿವ ಆತಂಕವಿದೆ ಎಂದು ಗಮನ ಸೆಳೆದರು ಹಾಗೂ ಈ ಕಾಮಗಾರಿ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಸಿದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಶಾಸಕರ ಜೊತೆ ಪ್ರತ್ಯೇಕವಾಗಿ ಚರ್ಚಿಸುತ್ತೇನೆ ಎಂದುರು ಬಳಿಕ ವಿರಾಮದ ಅವಧಿಯಲ್ಲಿ ಸಚಿವರನ್ನು ಭೇಟಿಯಾದ ಮಂತರ್ ಗೌಡ ಕಾಮಗಾರಿಯ ಬಗ್ಗೆ ದಾಖಲೆಗಳನ್ನು ನೀಡಿ ವಿವರಿಸಿದರು . ಈ ಗಾರಿಯ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.