ಸಮಗ್ರ ನ್ಯೂಸ್: ವಾಟ್ಸಾಪ್ ಇದೀಗ ವಿಂಡೋಸ್‌ನಲ್ಲಿ ಟೆಕ್ಸ್ಟ್ ಗಾತ್ರವನ್ನು ಅಡ್ಜಸ್ಟ್ ಮಾಡುವ ಹೊಸ ಫೀಚರ್ ಲಾಂಚ್ ಮಾಡಲು ಹೊರಟಿದೆ.
ಈ ಹೊಸ ಫೀಚರ್ಸ್ ಬಳಕೆದಾರರಿಗೆ ತಮ್ಮ ವಿಂಡೋಸ್ ಡೆಸ್ಕ್‌ಟಾಪ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾದ ಟೆಕ್ಸ್ಟ್ ಗಾತ್ರವನ್ನು ಕಸ್ಟಮೈಸ್ ಮಾಡಲು ಅನುಮತಿಸುವ ಮೂಲಕ ಯೂಸರ್‌ಗಳಿಗೆ ಹೆಚ್ಚಿನ ಅನುಕೂಲ ಮಾಡಲಿದೆ. ಸೆಟ್ಟಿಂಗ್‌ನ ಪರ್ಸನಲೈಜೇಷನ್ ಮೆನು ಅಡಿಯಲ್ಲಿ ಹೊಸ ಆಯ್ಕೆ ಲಭ್ಯವಿದೆ.
ಈ ಹೊಸ ಫೀಚರ್ ನೊಂದಿಗೆ , ಟೆಕ್ಸ್ ಗಾತ್ರವನ್ನು ಸರಿ ಹೊಂದಿಸಲು ಕೆಲವು ಮಹತ್ವದ ಶಾರ್ಟ್ ಕಟ್ ಗಳನ್ನು ಕೂಡಾ ಬಳಕೆದಾರರಿಗೆ ವಾಟ್ಸಾಪ್ ನೀಡಿದೆ. ಸದ್ಯ ಈ ಟೆಕ್ಸ್ಟ್ ಗಾತ್ರವನ್ನು ಸರಿ ಹೊಂದಿಸುವ ಫೀಚರ್ ಬೀಟಾ ವರ್ಷನ್‌ನಲ್ಲಿ ಮಾತ್ರವೇ ಲಭ್ಯವಿದೆ.