ಸಮಗ್ರ ನ್ಯೂಸ್: ಎನ್ಸಿಪಿಯ ಅಜಿತ್ ಪವಾರ್ ಮತ್ತು ಪಕ್ಷದ 29 ನಾಯಕರು ಮಹಾರಾಷ್ಟ್ರ ಸರ್ಕಾರವನ್ನು ಸೇರುವ ನಿರೀಕ್ಷೆಯಿದ್ದು, ಶರದ್ ಪವಾರ್ ಅವರು ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ಮೂಲಕ ಪವಾರ್ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಈ ಹುದ್ದೆಯನ್ನ ಹಂಚಿಕೊಳ್ಳಲಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯುವ ಬಯಕೆಯನ್ನ ಶರದ್ ಪವಾರ್ ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಇದಕ್ಕೂ ಮುನ್ನ ಎನ್ಸಿಪಿ ಶಾಸಕರ ಗುಂಪು ಅಜಿತ್ ಪವಾರ್ ಅವರ ಮುಂಬೈ ನಿವಾಸದಲ್ಲಿ ಸಭೆ ಸೇರಿ, ಪಕ್ಷದ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಹಿರಿಯ ಮುಖಂಡ ಛಗನ್ ಭುಜ್ಬಲ್ ಕೂಡ ಹಾಜರಿದ್ದರು. ಆದ್ರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಸಭೆಯಲ್ಲಿ ಹಾಜರಿರಲಿಲ್ಲ ಎಂದು ತಿಳಿದುಬಂದಿದೆ.