ಸಮಗ್ರ ನ್ಯೂಸ್: ಪಶ್ಚಿಮ ಘಟ್ಟ ವತಿಯಿಂದ ಆನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟುವ ಮಹತ್ವದ ಅಭಿಯಾನವಾದ ವನ್ಯಜೀವಿ ಆಹಾರ ಗಿಡಗಳ ನೆಡುವಿಕೆ ಅಭಿಯಾನವನ್ನು ಇಂದು (ಜುಲೈ.2) ಕಡಬ ತಾಲೂಕಿನ ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಕಾಡಂಚಿನಲ್ಲಿ ನಡೆಸಲಾಯಿತು.
ವನ್ಯಪ್ರಾಣಿಗಳಿಗೆ ಆಹಾರ ಪೂರೈಕೆ ಸಲುವಾಗಿ ಹಣ್ಣಿನ ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಪ್ರಥಮವಾಗಿ ಆರಂಭಿಸಲಾಯಿತು. ಆರಂಭಿಕವಾಗಿ ಮೊದಲನೇ ಹಂತದಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ( ರಿ ) ಆಡಳಿತ ನಿರ್ದೇಶಕರಾದ ದೀಪಕ್ , ಪ್ರಸಾದ್ ಗೌಡ ಅಲಡ್ಕ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ, ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಯೋಗೀಶ್ ಜಿ. ಸಿ ಅರಣ್ಯ ರಕ್ಷಕ ಪ್ರಕಾಶ್ ಕುಮಾರ್ ಅರಣ್ಯ ವೀಕ್ಷಕ ಅಚ್ಯುತ ಉಪಸ್ಥಿತರಿದ್ದರು. ಪಶ್ಚಿಮ ಘಟ್ಟ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ನ ಲಕ್ಷ್ಮಣ್ ಹಾಗೂ ತೀರ್ಥೇಶ್ ಉಪಸ್ಥಿತರಿದ್ದರು.
ಈ ವರ್ಷಾಂತ್ಯಕ್ಕೆ ಅಭಿಯಾನದ ಅಂಗವಾಗಿ 25000 ಸಾವಿರ ಗಿಡಗಳನ್ನು ಪಶ್ಚಿಮ ಘಟ್ಟಗಳ ವ್ಯಾಪ್ತಿಯೊಳಗೆ ನೆಡುವ ಗುರಿಯನ್ನು ಸಂಸ್ಥೆ ಹೊಂದಿದ್ದು ಸಾರ್ವಜನಿಕರು ಹೆಚ್ಚಿನ ಸಹಕಾರವನ್ನು ಸಂಸ್ಥೆಗೆ ನೀಡಿ ಆನೆ ಮತ್ತು ಮಾನವ ಸಂಘರ್ಷವನ್ನು ನಿಯಂತ್ರಿಸಲು ಜೋಡಿಸಬೇಕೆಂದು ಸಂಸ್ಥೆ ಈ ಮೂಲಕ ಸಾರ್ವಜನಿಕರಿಗೆ ಮನವಿಯನ್ನು ಮಾಡಿದೆ.