ನವದೆಹಲಿ : ಕೊರೊನಾ ಸಂಕಷ್ಟ ತೊಲಗಿಸಲು ಯೋಗ ಆಶಾಕಿರಣವಾಗಿದೆ. ಯೋಗದಿಂದ ಜನರ ಉತ್ಸಾಹ ಪ್ರೀತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು 7 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಜನರಿಂದ ಯೋಗ ನಡೆಯುತ್ತಿದೆ. ಕೊರೊನಾದ ವಿರುದ್ಧ ಹೋರಾಡಲು ಯೋಗ ಸಹಕಾರಿಯಾಗಿದೆ. ಕೊರೊನಾದಿಂದ ಇಂದು ವಿಶ್ವವೇ ನರಳುತ್ತಿದೆ. ಹೀಗಾಗಿ ದೊಡ್ಡ ಕಾರ್ಯಕ್ರಾಮ ಆಯೋಜನೆ ಮಾಡಲಾಗುತ್ತಿಲ್ಲ.
ಆದರೂ ಯೋಗ ದಿನದ ಹುಮ್ಮಸ್ಸು ಮಾತ್ರ ಕಡಿಮೆಯಾಗಲ್ಲ. ಈ ಬಾರಿಯ ಧೇಯ್ಯವಾಕ್ಯ `ಯೋಗ ಫಾರ್ ವೆಲ್ ನೆಸ್’ ಯೋಗ ಸಂಯಮ ಕಾಪಾಡಲು ಸಹಕಾರಿಯಾಗಿದೆ. ಕೊರೊನಾದಿಂದ ಭಾರತ ಹಾಗೂ ವಿಶ್ವಕ್ಕೆ ಸಂಕಷ್ಟ ಎದುರಾಗಿದೆ. ಸಂಕಷ್ಟದಲ್ಲಿ ಯೋಗ ದಿನ ಮರೆತುಬಿಡಬಹುದಿತ್ತು. ಆದರೆ ಜನರಲ್ಲಿ ಯೋಗದ ಬಗ್ಗೆ ಉತ್ಸಾಹ ಹೆಚ್ಚಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಯೋಗ ಸಾಧಕರು ಸಿದ್ದರಾಗಿದ್ದಾರೆ ಎಂದರು .
ಯೋಗದಿಂದ ಆರೋಗ್ಯ ಹಾಗೂ ದೀರ್ಘ ಆಯುಷ್ಯ ಸಿಗುತ್ತದೆ. ಉತ್ತಮ ಆರೋಗ್ಯ ಯಶಸ್ಸಿಗೆ ಯೋಗ ಸಹಕಾರಿಯಾಗಿದೆ.. ದೇಶದಲ್ಲಿ ದೈಹಿಕಆ ರೋಗ್ಯ ಬಗ್ಗೆ ಮಾತ್ರ ಚರ್ಚೆಯಾಗುತ್ತಿಲ್ಲ. ಯೋಗದ ಮೂಲಕ ಮಾನಸಿಕ ಅರೋಗ್ಯದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಯೋಗ ಮಾಡುವವರ ಮೇಲೆ ವಿಜ್ಞಾನಿಗಳು ಪ್ರಯೋಗ ಮಾಡುತ್ತಿದ್ದಾರೆ. ಯೋಗದಿಂದ ಮಕ್ಕಳ ಆರೋಗ್ಯದ ಪ್ರಯೋಗಗಳು ನಡೆಯುತ್ತಿವೆ. ಮಕ್ಕಳು ಕೊರೊನಾ ಎದುರಿಸಲು ಯೋಗ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.