ಸಮಗ್ರ ನ್ಯೂಸ್: ಕೇಂದ್ರ ಹಣಕಾಸು ಸಚಿವಾಲಯ ಸೋಮವಾರದಂದು 16 ರಾಜ್ಯಗಳ ಒಟ್ಟು 56,415 ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ್ದು, ಈ ಪೈಕಿ ಕರ್ನಾಟಕದ 3,647 ಕೋಟಿ ರೂ. ಯೋಜನೆಗಳು ಸಹ ಸೇರಿವೆ.
ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ರಸ್ತೆಗಳು, ವಿದ್ಯುತ್, ಸೇತುವೆಗಳು ಹಾಗೂ ರೈಲ್ವೆ ಸೇರಿದಂತೆ ವಿವಿಧ ವಲಯಗಳ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಯೋಜನೆಗಳು ಇವಾಗಿವೆ ಎಂದು ಮೂಲಗಳು ಹೇಳಿವೆ.
50 ವರ್ಷದವರೆಗಿನ ಬಡ್ಡಿ ರಹಿತ ಸಾಲದ ಯೋಜನೆ ಇದಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ರಾಜ್ಯಗಳಿಗೆ ವಿಶೇಷ ನೆರವಿನ ಯೋಜನೆ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಇದೀಗ ಇದಕ್ಕೆ ಅನುಮೋದನೆ ನೀಡಿದೆ.