ಸಮಗ್ರ ನ್ಯೂಸ್: ಪರೀಕ್ಷಾ ಮಾದರಿಯನ್ನು ಪರಿಶೀಲಿಸಲು ಐಐಟಿ ಕೌನ್ಸಿಲ್ ಅನ್ನು ಕೇಳಲಾಗಿದ್ದು. ಇದರಿಂದ ಕೋಚಿಂಗ್‌ಗಳನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಐಐಟಿ ದೆಹಲಿಗೆ ೫ ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ
ಐಐಟಿ ಅಡ್ವಾನ್ಸ್ ಬದಲಿಗೆ ಜಂಟಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಐಐಟಿ ಕೌನ್ಸಿಲ್ ಸಭೆಯಲ್ಲೂ ಕೇಂದ್ರ ಸರ್ಕಾರ ಈ ಬಗ್ಗೆ ಸಲಹೆಯನ್ನು ಮುಂದಿಟ್ಟಿದ್ದು, ಸಿಎಫ್‌ಟಿಐ, ಐಐಟಿ, ಎನ್‌ಐಟಿ ಸೇರಿದಂತೆ ದೇಶದ ಇತರೆ ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಾಮಾನ್ಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿತ್ತು. ಇದರೊಂದಿಗೆ ಜೆಇಇ ಪರೀಕ್ಷೆಯನ್ನು ನಿಲ್ಲಿಸುವುದು ಕೂಡ ಸರ್ಕಾರದ ಯೋಜನೆಯಾಗಿದೆ. ಈ ಸಭೆಯಲ್ಲಿ, ಎಲ್ಲಾ CFTI ಸಂಸ್ಥೆಗಳಿಗೆ ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಪ್ರಸ್ತಾವನೆಯನ್ನು ಮಂಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು ಇದರ ನಿಯಮಗಳೇ ಮುಂದಿನ ದಿನದಲ್ಲಿ ಜಾರಿಯಾಗುತ್ತದೆ.
ಐಐಟಿಯ ಬಹುತೇಕ ನಿರ್ದೇಶಕರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ವರದಿಗಳ ಪ್ರಕಾರ ಅವರು ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸುವ ಪರವಾಗಿಲ್ಲ. ಬೇರೆ ಪರೀಕ್ಷೆಯನ್ನೇ ಬರೆಯಬೇಕು ಎಂದಿದ್ದಾರೆ. ಹೆಚ್ಚಿನ ಸಂಸ್ಥೆಗಳು ಜಂಟಿ ಪ್ರವೇಶ ಪರೀಕ್ಷೆಯ ಪರವಾಗಿಲ್ಲ ಎಂದು ಐಐಟಿಯ ನಿರ್ದೇಶಕರು ಉಲ್ಲೇಖಿಸಿದ್ದು ಈ ಕಾರಣಕ್ಕೆ ಇನ್ನೂ ಕೆಲ ಬದಲಾವಣೆಗಳನ್ನು ಮಾಡಲಿದೆ.
ಪರೀಕ್ಷಾ ಮಾದರಿಯನ್ನು ಪರಿಶೀಲಿಸಲು ಐಐಟಿ ಕೌನ್ಸಿಲ್ ಅನ್ನು ಕೇಳಲಾಗಿದೆ. ಇದಕ್ಕಾಗಿ ಐಐಟಿ ದೆಹಲಿಗೆ ೫ ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.