ಸಮಗ್ರ ನ್ಯೂಸ್: ಇಂದಿನಿಂದ ಜೂನ್ 27ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಬಳ್ಳಾರಿ, ಕೊಡಗು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಮಂಕಿ, ಬೆಳ್ತಂಗಡಿ, ಹಿಡಿಯೂರು, ಕುಂದಾಪುರ, ವಿರಾಜಪೇಟೆ, ಮಂಡ್ಯ, ಕೋಟ, ಸಿರಾ, ಮಾಣಿ, ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಟ್ಟಿಗೆಹಾರ, ತಿಪಟೂರು, ಗುಬ್ಬಿ, ಉಡುಪಿ, ಹಾಸನ, ಹೆಸರಘಟ್ಟ, ಮೂಡಿಗೆರೆ, ಸಿದ್ದಾಪುರ, ಪಣಂಬೂರು, ಮುಲ್ಕಿ, ಮಂಗಳೂರು, ಗೋಕರ್ಣ, ಕಡೂರು, ಕಳಸ, ಜಯಪುರ, ಹುಣಸೂರು, ಸಾಲಿಗ್ರಾಮ, ಚಿಕ್ಕಮಗಳೂರು, ಉತ್ತರಹಳ್ಳಿ, ಶ್ರವಣಬೆಳಗೊಳ, ದಾವಣಗೆರೆ, ಹೊಸದುರ್ಗ, ಚಾಮರಾಜನಗರ, ತುಮಕೂರು, ಸಂಡೂರಿನಲ್ಲಿ ಮಳೆಯಾಗಿದೆ.
ಅರಬ್ಬಿ ಸಮುದ್ರದಲ್ಲಿ ಮುಂಗಾರು ಇನ್ನಷ್ಟು ಮುನ್ನಡೆಯಲು ಪೂರಕ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿನಲ್ಲೂ ಮಾರುತಗಳು ಪ್ರವೇಶಿಸಿದ್ದು, ಜೂ 25ರಿಂದ ಈ ಭಾಗದಲ್ಲಿ ಜೋರಾಗಿ ಮಳೆಯಾಗಲಿದೆ.