ಸಮಗ್ರ ನ್ಯೂಸ್: ಅಕ್ರಮ ಗೋಸಾಗಾಟ ಅರೋಪದಲ್ಲಿ ಬೆಳ್ಳಾರೆ ಪೊಲೀಸರು ಇಬ್ಬರನ್ನು ಬಂಧಿಸಿದ ಹಾಗೂ ಇಬ್ಬರು ಪರಾರಿಯಾಗಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಮೂರು ಗಂಡು ಕರುಗಳು, ಆಕ್ಟಿವಾ ಸ್ಕೂಟರ್, ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂ.18ರಂದು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮುವಪ್ಪೆ ಎಂಬಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಐ ಸುಹಾಸ್ ಆರ್ ಹಾಗೂ ಸಿಬ್ಬಂದಿಗಳು ಕರ್ತವ್ಯ ದಲ್ಲಿದ್ದ ವೇಳೆ ಯಾವುದೇ ಪರವಾನಿಗೆ ಹೊಂದದ ಪಿಕಪ್ ವಾಹನ ನಂಬ್ರ ಕೆಎ21ಬಿ4460 ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಅಕ್ರಮ ಗೋಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
3 ಗಂಡು ಕರುಗಳ ಹಾಗೂ ಅಕ್ರಮ ಸಾಗಾಟಕ್ಕೆ ಬಳಿಸಿದ ಹೊಂಡಾ ಆಕ್ಟಿವಾ ಸ್ಕೂಟರ್ ವಾಹನ, ಹಾಗೂ ಪಿಕಪ್ ವಾಹನ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಇಬ್ಬರು ಆರೋಪಿಗಳಾದ ಇಸುಬು, ಹುಸೈನ್ ಎಂಬವರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳಾದ ಕೃಷ್ಣಪ್ಪ ಮತ್ತು ಆಲಿ ಕೋನಡ್ಕ ಪರಾರಿಯಾಗಿದ್ದು, ಅವರ ವಿರುದ್ದ ಕೇಸು ದಾಖಲಿಸಿ ಕೊಂಡಿದ್ದಾರೆ. ವಿಚಾರಣೆ ಬಳಿಕ ಇಸುಬು ಮನೆಯಲ್ಲಿದ್ದ ನಾಲ್ಕು ಅಕ್ರಮ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಬೆಳ್ಳಾರೆ ಪಿಎಸ್ಐ ಸುಹಾಸ್ ಹಾಗೂ ಸಿಬ್ಬಂದಿಗಳಾದ ಶ್ರೀಶೈಲ, ಮಂಜುನಾಥ್, ಸುಭಾಷ್ ಕಿತ್ತೂರ್, ಬಸವರಾಜ್ ಭಾಗವಹಿಸಿದ್ದರು.