ಸಮಗ್ರ ನ್ಯೂಸ್: ಸುಳ್ಯ ಕ್ಷೇತ್ರದಲ್ಲಿ ಟಿಕೆಟ್ ಗೆ ಪಟ್ಟು ಹಿಡಿದು, ಪ್ರಭಾವ ಬಳಸಿ ಅಭ್ಯರ್ಥಿಯಾಗಿ ಕಾರ್ಯಕರ್ತರ, ಜನಾಭಿಪ್ರಾಯವಿಲ್ಲದೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋಲನುಭವಿಸಿದ ಕೃಷ್ಣಪ್ಪರವರು ಸುಳ್ಯದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಯಕರ್ತರ ಮೇಲೆ ಆರೋಪ ಹೊರಿಸಿ ಕಿರುಕುಳ ನೀಡುತ್ತಿರುವ ಕೃಷ್ಣಪ್ಪರವರು ಮೊದಲು ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕು.
ಒಬ್ಬ ಅಭ್ಯರ್ಥಿ ಗೆದ್ದರೂ ಸೋತರೂ ಪಕ್ಷದಲ್ಲಿ ಹೇಗಿರಬೇಕು? ಹೇಗೆ ತಪ್ಪನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕೆಂದು ತಿಳಿದು ಕೊಳ್ಳಬೇಕು.
ಆದರೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಉಚ್ಚಾಟಿಸಲು ಪ್ರಯತ್ನ ಪಡುವುದು ಕೋರ್ಟ್, ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಿ ಬೀದಿರಂಪ ಮಾಡುತ್ತಿರುವ ಕೃಷ್ಣಪ್ಪರವರಿಗೆ ತಲೆ ಕೆಟ್ಟಿದೆಯೇ ಎಂಬ ಸಂಶಯ ಮೂಡುತ್ತಿದೆ.
ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸವಾರಿ ಮಾಡಲು ಬಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದ ಕ ಜಿಲ್ಲಾ ಕಾಂಗ್ರೆಸ್ ಈ ಬೆಳವಣಿಗೆಗಳ ಬಗ್ಗೆ ಖುದ್ದು ಪರಿಶೀಲಿಸಿ ಸಮಸ್ಯೆಯನ್ನು ಸರಿಪಡಿಸಬೇಕು.
ಕೃಷ್ಣಪ್ಪರೇ, ಇದು ಜಿಗಣಿಯಲ್ಲ ಇದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್. ಅದರಲ್ಲೂ ಸುಳ್ಯ ಕ್ಷೇತ್ರ ಇಲ್ಲಿ ನಾವು ಕಾರ್ಯಕರ್ತರೆಲ್ಲರೂ ಸ್ವಾಭಿಮಾನಿಗಳು, ನಮಗೆ ತಾಳ್ಮೆ, ಕನಿಕರ ಎಲ್ಲಾ ಇದೆ. ಆದರೆ ನಮ್ಮನ್ನು ಕೆಣಕಲು ಬಂದರೆ ಬೀದಿಗಿಳಿಯಬೇಕಾಗಬಹುದು.
ಇಲ್ಲದಿದ್ದರೆ “ಕೃಷ್ಣಪ್ಪ ಹಠಾವೋ ಕಾಂಗ್ರೆಸ್ ಬಚಾವೋ” ಅಭಿಯಾನ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲೂ ಬಹುದು ಎಂದು ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜರವರು ಪತ್ರಿಕಾ ಹೇಳಿಕೆ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.