Ad Widget .

ಆಹಾರ ನೀಡಿದ ಮಹಿಳೆಗೆ ಕಚ್ಚಿದ ಬೀದಿ ನಾಯಿ| ರೇಬೀಸ್‌ನಿಂದ ಶ್ವಾನ ಪ್ರೇಮಿ ಸಾವು

ಸಮಗ್ರ ನ್ಯೂಸ್: ಬೀದಿ ನಾಯಿಗಳ ಹಾವಳಿಯ ಆತಂಕದ ನಡುವೆಯೇ ಕೇರಳದಾದ್ಯಂತ ರೇಬಿಸ್ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚೆಗೆ ಗಾಯಾಳು 49 ವರ್ಷದ ಶ್ವಾನ ಪ್ರೇಮಿಯೊಬ್ಬರು ಇದಕ್ಕೆ ಬಲಿಯಾಗಿದ್ದಾರೆ. ಈ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

Ad Widget . Ad Widget .

ಮೃತರನ್ನು ತಿರುವನಂತಪುರದ ಅಂಚುತೆಂಗು ಮೂಲದ ಸ್ಟೆಫಿನ್ ವಿ ಪೆರೇರಾ (49) ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ಮನೆಯ ಸಮೀಪ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ನಾಯಿ ಕಚ್ಚಿತ್ತು. ಆದ್ರೆ, ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದನ್ನು ನಿರ್ಲ್ಯಕ್ಷಿಸಿದ್ದರು.

Ad Widget . Ad Widget .

ವರದಿಗಳ ಪ್ರಕಾರ, ತಿರುವನಂತಪುರಂ ಜಿಲ್ಲೆಯ ಚಿರಯಿಂಕೀಝು ಪಶ್ಚಿಮಕ್ಕೆ ಸುಮಾರು 20 ಕಿಮೀ ದೂರದಲ್ಲಿರುವ ಅಂಚುತೆಂಗು ಎಂಬ ಕರಾವಳಿ ಗ್ರಾಮದ ನಿವಾಸಿಯಾದ ಸ್ಟೆಫಿನ್ ಜೂನ್ 9 ರಂದು ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತನ್ನ ಸಹೋದರನನ್ನು ನೋಡಿಕೊಳ್ಳುತ್ತಿರುವಾಗ ಸ್ಟೆಫಿನ್‌ಗೆ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡವು. ಸಂಭವನೀಯ ಕಾರಣಗಳ ಬಗ್ಗೆ ವೈದ್ಯರು ವಿಚಾರಿಸಿದಾಗ, ತಾನು ಆಹಾರಕ್ಕಾಗಿ ನೀಡುತ್ತಿದ್ದ ಬೀದಿನಾಯಿಗಳಲ್ಲಿ ಒಂದು ತನ್ನ ಕೈಯನ್ನು ಕಚ್ಚಿದ ಬಗ್ಗೆ ವೈದ್ಯರಿಗೆ ತಿಳಿಸಿದ್ದು, ಕೂಡಲೇ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಕಳೆದ ಭಾನುವಾರ ಸಂಜೆ ಮೃತಪಟ್ಟಿದ್ದಾಳೆ. ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

Leave a Comment

Your email address will not be published. Required fields are marked *