ಸಮಗ್ರ ನ್ಯೂಸ್: ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಬಿಪರ್‌ಜಾಯ್ ಚಂಡಮಾರುತದಿಂದಾಗಿ ಸೌರಾಷ್ಟ್ರ, ಕಚ್ ಮತ್ತು ಉತ್ತರ ಗುಜರಾತ್‌ನ ಪಕ್ಕದ ಪ್ರದೇಶಗಳು ಪ್ರಸ್ತುತದಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಈ ಸೈಕ್ಲೋನ್ ಚಂಡಮಾರುತವು ಸಂಜೆಯಿಂದ ರಾಜಸ್ಥಾನದ ಪಕ್ಕದ ಭಾಗಗಳತ್ತ ಸಾಗಲಿದೆ.
ಗುರುವಾರ ರಾತ್ರಿ ಗುಜರಾತ್‌ಗೆ ಅಪ್ಪಳಿಸಿದ ‘ಅತ್ಯಂತ ತೀವ್ರ’ ಚಂಡಮಾರುತ ಬಿಪರ್‌ಜೋಯ್ ಈಗ ‘ಸೈಕ್ಲೋನಿಕ್’ ಚಂಡಮಾರುತವಾಗಿ ದುರ್ಬಲಗೊಂಡಿದೆ. ಇಲ್ಲಿನ ಕರಾವಳಿ ಭಾಗದ ಭುಜ್‌ನಿಂದ ಪಶ್ಚಿಮ-ವಾಯುವ್ಯಕ್ಕೆ 30 ಕಿಲೋ ಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಐಎಂಡಿ ನಿರ್ದೇಶಕ ಡಾ. ಮೃತ್ಯುಂಜಯ್ ಮಹಾಪಾತ್ರ ವಿವರಿಸಿದ್ದಾರೆ.
ಸದ್ಯ ಕಳೆದ 24 ಗಂಟೆಗಳಲ್ಲಿ ಗುಜರಾತ್ ಕರಾವಳಿ, ಸೌರಾಷ್ಟ್ರದ ಉತ್ತರ ಭಾಗಗಳು, ಕಚ್ ಮತ್ತು ಉತ್ತರ ಗುಜರಾತ್‌ನ ಪಕ್ಕದ ಪ್ರದೇಶಗಳು ಪ್ರಸ್ತುತ ಭಾರಿ ಮಳೆ-ಗಾಳಿಯಿಂದ ಸಾಕಷ್ಟು ಹಾನಿ ಉಂಟಾಗಿದೆ. ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಸರ್ಕಾರ ಅಗತ್ಯ ಮುಂಜಾಗೃತೆ ವಹಿಸಿದೆ.
ಗುಜರಾತ್ ಕರಾವಳಿ ಭಾಗದಲ್ಲಿ ಬಿಪರ್‌ಜಾಯ್ ಅಬ್ಬರಕ್ಕೆ ಜನಜೀವನ ಅಸ್ತವೆಸ್ತವಾಗಿದೆ. ಇಲ್ಲಿ ಮೊರ್ಬಿ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬ ಹಾನಿಗೀಡಾಗಿವೆ. ಸುಮಾರು 45 ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಗಾಳಿಗೆ ಮನೆ ಮೇಲಿನ ಶೀಟುಗಳು ಕಿತ್ತು ಹೋಗಿವೆ.