ಸಮಗ್ರ ನ್ಯೂಸ್: ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ.
ಗೃಹ ಜ್ಯೋತಿ ಯೋಜನೆಗೆ ಜೂನ್ 15 ರಿಂದ ಅರ್ಜಿ ಸಲ್ಲಿಕೆ ಆರಂಭಿಸಲಾಗುವುದು ಎಂದು ಈ ಹಿಂದೆ ರಾಜ್ಯ ಸರ್ಕಾರ ತಿಳಿಸಿತ್ತು.
ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 18 ಕ್ಕೆ ಮುಂದೂಡಿದೆ.
ಜೂನ್ 18 ರಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಕಂಪ್ಯೂಟರ್, ಮೊಬೈಲ್ ನಿಂದ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗುವುದು.
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಗಳಲ್ಲೂ ಅವಕಾಶ ಕಲ್ಪಿಸಲಾಗುತ್ತಿದ್ದು, ಜೂನ್ 15ರಿಂದ ಅರ್ಜಿ ಪ್ರಾರಂಭ ಮಾಡುತ್ತೇವೆ. ಗ್ರಾಹಕರ ದೃಷ್ಠಿಯಿಂದ ಸರ್ವರ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಎಲ್ಲಾ ಸಿದ್ಧತೆಗಳನ್ನು ಇ-ಗೌರ್ನೆನ್ಸ್ ಇಲಾಖೆ ಮಾಡಿಕೊಂಡಿದೆ.
ಬಾಡಿಗೆದಾರರು ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?
ವಿದ್ಯುತ್ ಬಿಲ್ ನಲ್ಲಿ ನಮೂದಿಸಲಾಗಿರುವ ಗ್ರಾರಕರ ಸಂಖ್ಯೆ, ಖಾತೆ ಸಂಖ್ಯೆ, ಬಾಡಿಗೆ, ಭೋಗ್ಯದ ಕರಾರು ಪತ್ರ ಸಲ್ಲಿಸುವುದು. ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಜೊತೆಗೆ, ಆಧಾರ್ ಅನ್ನು ಸಲ್ಲಿಸುವ ಮೂಲಕ ಪಡೆಯಬಹುದಾಗಿದೆ. ಗೃಹ ಜ್ಯೋತಿ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಕೆ ಜೂನ್.18ರಿಂದ ಆರಂಭವಾಗಲಿದೆ. ಆ ಬಳಿಕ ಕೊನೆಯ ದಿನಾಂಕವನ್ನು ತಿಳಿಸಲಾಗುತ್ತದೆ.