ಸಮಗ್ರ ನ್ಯೂಸ್: ಒಂದು ಗಿಡ ನೆಡುವುದರಿಂದ ನಾವು ಕೇವಲ ಆಮ್ಲಜನಕ ಸಿಗುತ್ತದೆ ಎಂದು ಮಾತ್ರ ಭಾವಿಸಿದ್ದೇವೆ. ಆದರೆ ಅದು ಹವಾಮಾನ ವೈಪರೀತ್ಯ ತಡೆ, ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರಿನ ನಿರ್ವಹಣೆ, ಮಣ್ಣಿನ ಸವಕಳಿ ತಡೆಗಟ್ಟುವಿಕೆ ಸೇರಿದಂತೆ ಹಲವು ಲಾಭಗಳನ್ನು ಮಾಡಿ ಕೊಡುತ್ತದೆ” ಎಂದು ಸಸ್ಯ ಶಾಸ್ತ್ರಜ್ಞ, ಪೊನ್ನಂಪೇಟೆಯ ಅರಣ್ಯ ಕಾಲೇಜು ಪ್ರಾದ್ಯಾಪಕರಾದ ಜಡೇಗೌಡರು ಹೇಳಿದರು.
ಇಲ್ಲಿನ ಕೆಮ್ಮಣ್ಣುಗುಂಡಿಯಲ್ಲಿ ಪ್ರತಿಧ್ವನಿ ತಂಡ ಹಮ್ಮಿಕೊಂಡಿದ್ದ ಚಾರಣ ಮತ್ತು ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮ ಕಾಡಿನ ಆರೋಗ್ಯವನ್ನು ನಮ್ಮ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳನ್ನು ನೋಡಿದರೆ ತಿಳಿಯುತ್ತದೆ. ಪರಿಸರವು ಗಿಡ ಮರ ಪ್ರಾಣಿಗಳ ಮೂಲಕ ಸತತ ಸಂದೇಶ ರವಾನಿಸುತ್ತಿರುತ್ತದೆ. ನಾವು ಅದನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದರು.
ಸಂಶೋಧಕಿ, ಶಿಬಿರದ ಆಯೋಜಕಿ ಪಲ್ಲವಿ ಪೂಜಾರಿ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಒಂದು ಡಿಗ್ರಿ ಉಷ್ಣಾಂಶ ಹೆಚ್ಚಿದರೂ ಅದು ಪ್ರಾಣಿ ಪಕ್ಷಿಗಳ ಮೇಲೆ ಅತಿದೊಡ್ಡ ಪರಿಣಾಮ ಬೀರುತ್ತದೆ. ಒಂದು ಜಾತಿಯ ಮರ ಒಂದು ತಿಂಗಳು ತಡವಾಗಿ ಹೂವು ಬಿಟ್ಟರೆ ಅದು ಅದೆಷ್ಟೋ ಪ್ರಾಣಿ ಪಕ್ಷಿಗಸಲ ಮೇಲೆ ಗದ ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ ಪ್ರಜ್ಞಾವಂತರಾಗಿ ಪರಿಸರವನ್ನು ನೋಡಿ, ಅದರ ಅಗತ್ಯತೆ ಅರಿತು ಮುಂದೆ ಸಾಗಬೇಕಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕೆಮ್ಮಣ್ಣುಗುಂಡಿ ಬೆಟ್ಟಕ್ಕೆ ಚಾರಣ ಮಾಡಿದ ಶಿಭಿರಾರ್ಥಿಗಳು ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸ ಸಂಗ್ರಹಿಸಿ ಸಹ ಚಾರಣಿಗರಲ್ಲಿ ಪರಿಸರ ಜಾಗ್ರತಿ ಮೂಡಿಸಿದರು. ಈ ಸಂದರ್ಭದಲ್ಲಿ ಭದ್ರಾ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ ಪ್ರಭಾಕರನ್, ಪ್ರತಿದ್ವನಿ ಆಯೋಜಕ ಸಾಯಿರಾಜ್ ನಾವುಂದ, ಆರ್ ಸಿ ಕಾಲೇಜಿನ ಅಡ್ವೆಂಚರ್ ಕ್ಲಬ್ ಸದಸ್ಯರು, ಬೆಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿಗಳು ಇನ್ನಿತರ ಪರಿಸರ ಪ್ರೇಮಿ ಶಿಬಿರಾರ್ಥಿಗಳು ಹಾಜರಿದ್ದರು.