ಸಮಗ್ರ ನ್ಯೂಸ್: ತಲಾಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈ ಬಿಟ್ಟು ತೀರ್ಥಕ್ಷೇತ್ರವಾಗಿ ಘೋಷಿಸಲು ಸರಕಾರಕ್ಕೆ ಮನವಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ರವರ ಮೂಲಕ ಸರ್ಕಾರಕ್ಕೆ ಅಗ್ರಹಿಸಲಾಯಿತು.
ಕೊಡವರ ಕುಲದೇವಿ ಕೊಡಗಿನ ಜನರ ಆರಾಧ್ಯ ದೇವತೆ ದಕ್ಷಿಣ ಕರ್ನಾಟಕದ ಜೀವನದಿ ಕಾವೇರಿ ಮಾತೆಯ ಉಗಮಸ್ಥಾನ ತಲಕಾವೇರಿಯ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರದ ಪಟ್ಟಿಯಿಂದ ಕೈ ಬಿಟ್ಟು ಪುಣ್ಯ ತೀರ್ಥಕ್ಷೇತ್ರವೆಂದು ಮುಂಗಡ ಪತ್ರದಲ್ಲಿ ಘೋಷಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಯಿಂದ ಸರಕಾರಕ್ಕೆ ಮನವಿ ಮಾಡಿದೆ. ಅಲ್ಲದೆ ಸಂಗಮ ಕ್ಷೇತ್ರ ಭಾಗಮಂಡಲವನ್ನು ದೇವಾಳ ನಗರ ಎಂದು ಸರಕಾರ ಮುಂದಿನ ಕಡಪತ್ರದಲ್ಲಿ ಘೋಷಿಸುವುದಲ್ಲದೆ ಪಾರಂಪರಿಕ ಧಾರ್ಮಿಕ ಕ್ಷೇತ್ರವಾಗಿ ಮತ್ತು ಸ್ಥಳೀಯ ಬದುಕಿಗೆ ದಕ್ಕೆ ಬಾರದಂತೆ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಇಂತಿ ಕ್ರಮ ವಹಿಸಬೇಕೆಂದು ಹಾಗೂ ಕಳೆದ ಹಲವಾರು ತಿಂಗಳುಗಳಿಂದ ರಚಿಸದೆ ಇರುವ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಯನ್ನು ಒಳಗೊಂಡಂತೆ ಆದಷ್ಟು ಬೇಗ ಅರ್ಜಿಸಲು ಸರಕಾರ ಮುಂದಾಗ ಬೇಕೆಂದು ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ಅವರ ಮೂಲಕ ಸರಕಾರಕ್ಕೆ ಕೊಡವಾಮೆರ ಸಂಘಟನೆ ಮನವಿ ಮಾಡಿದೆ.