ಸಮಗ್ರ ನ್ಯೂಸ್: ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ನಿಗಮ, ಮಂಡಳಿ, ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರ ನೇಮಕಾತಿ ಆರಂಭವಾಗಲಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಸ್ಥಾನಕ್ಕೆ ಪತ್ರಕರ್ತ, ಹಿರಿಯ ಸಾಹಿತಿ, ನಾಟಕರಂಗದಲ್ಲಿ ಪಳಗಿರುವ ಹಿರಿಯ ಸಿನಿಮಾ ನಿರ್ದೇಶಕ ಸುಧಾಕರ ಬನ್ನಂಜೆ ಅವರ ಹೆಸರು ಮುಂಚೂಣಿಯಲ್ಲಿದ್ದು ಅವರ ಆಯ್ಕೆಯು ತುಳು ಸಾಹಿತ್ಯ ಅಕಾಡೆಮಿಗೆ ಇನ್ನಷ್ಟು ಗೌರವ ಸಿಕ್ಕಂತಾಗುತ್ತದೆ ಎಂದು ತುಳುವರು ಅಭಿಪ್ರಾಯಪಡುತ್ತಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಗದ್ದುಗೆಯಲ್ಲಿ ಕುಳಿತುಕೊಳ್ಳಲು ಈಗಾಗಲೇ ಬಿಜೆಪಿ ಬೆಂಬಲಿತ ಅನೇಕ ಮಂದಿ ಪ್ರಯತ್ನ ಪಡುತ್ತಿದ್ದಾರೆ. ಕೆಲವರ ವೈಯಕ್ತಿಕ ಹಿನ್ನೆಲೆಯೂ ಸರಿಯಾಗಿಲ್ಲ ಮತ್ತು ಕ್ರಿಮಿನಲ್ ಹಿನ್ನೆಲೆಯ ವೈಯಕ್ತಿಕ ಲಾಭಕ್ಕೋಸ್ಕರ ಸಂಘಟನೆ ಸೇರಲು ಬಯಸುವವರ ಮಧ್ಯೆ ಸುಧಾಕರ್ ಬನ್ನಂಜೆ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತಿದ್ದು ಅವರಿಗೆ ಅವಕಾಶ ಸಿಕ್ಕಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮೂಲಕ ತುಳು ಭಾಷೆ, ಪರಂಪರೆ ಹಾಗೂ ಸಾಹಿತ್ಯಕ್ಕೆ ಒತ್ತಾಸೆಯಾಗಿ ಕಾರ್ಯ ನಿರ್ವಹಿಸಲು ಸಿದ್ಧರಿರುವುದಾಗಿ ಬನ್ನಂಜೆ ಹೇಳುತ್ತಾರೆ.
ಸುಧಾಕರ ಬನ್ನಂಜೆ ಅವರು ಹಿಂದೆ ಕಾಂಗ್ರೆಸ್ ನಲ್ಲಿ ದುಡಿದ ಹಿನ್ನೆಲೆ ಹೊಂದಿರುವ ಬನ್ನಂಜೆ ಈಗಲೂ ಕಾಂಗ್ರೆಸ್ ನಾಯಕರ ಜತೆಗೆ ನಿಕಟ ಸಂಪರ್ಕ ಹೊಂದಿರುವುದು ಅವರ ಪಥವನ್ನು ಸುಗಮಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಸುಧಾಕರ ಬನ್ನಂಜೆ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿದ್ದರು. ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿ, ಜನಾರ್ದನ ಪೂಜಾರಿ ಜತೆಗೆ ನಿಕಟ ಬಾಂಧವ್ಯವನ್ನು ಹೊಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂ ಒಡನಾಟ ಹೊಂದಿರುವ ಅವರು ಬೆಂಗಳೂರಿನಲ್ಲೇ ಇದ್ದುಕೊಂಡು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಈಗಾಗಲೇ ಬಂಟ ಮತ್ತು ಬಿಲ್ಲವ ಸಮುದಾಯದವರು ಅತೀ ಹೆಚ್ಚು ಬಾರಿ ಆ ಹುದ್ದೆಯನ್ನು ಅಲಂಕರಿ ಸಿರುವುದರಿಂದ ಈ ಬಾರಿ ಬೇರೆ ಸಮುದಾಯಕ್ಕೆ ಅಧ್ಯಕ್ಷ ಹುದ್ದೆ ಲಭಿಸುವ ಸಾಧ್ಯತೆ ಇದೆ. ಇದು ಬನ್ನಂಜೆ ಆಯ್ಕೆಗೆ ಸುಗಮವಾದ ದಾರಿಯಾದಂತಾಗಿದೆ.