ಸಮಗ್ರ ನ್ಯೂಸ್ ಡೆಸ್ಕ್: ಅಡಿಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳದ ಮಲಾಯಿಬೆಟ್ಟು ಎಂಬಲ್ಲಿ ನಡೆದಿದೆ.
ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ ಮೃತ ಯುವಕ. ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಅವರ ತೋಟದಲ್ಲಿ ಅಡಿಕೆ ತೆಗೆಯುತ್ತಿದ್ದಾಗ ಘಟನೆ ನಡೆದಿದೆ.
ರಸ್ತೆಯ ಬದಿಯಲ್ಲಿ ಹಾದು ಹೋಗಿದ್ದ ಎಲ್.ಟಿ. ವಯರಿಗೆ ಫೈಬರ್ ದೋಟಿ ತಾಗಿ, ವಿದ್ಯುತ್ ಶಾಕ್ ಹೊಡೆದಿದೆ ಎಂದು ಹೇಳಲಾಗಿದೆ.
ಅಡಿಕೆ ವ್ಯಾಪಾರಿಯಾಗಿರುವ ಶಾಫಿ, ಗಿಡದಿಂದಲೇ ಅಡಿಕೆಯನ್ನು ಕ್ರಯಕ್ಕೆ ಪಡೆದುಕೊಳ್ಳುತ್ತಿದ್ದರು. ನಂತರ ಅಡಿಕೆಯನ್ನು ತೆಗೆದು, ಮಾರಾಟ ಮಾಡುತ್ತಿದ್ದರು. ಈ ಬಾರಿ ಫೈಬರ್ ಸಲಾಕೆಯನ್ನು ಖರೀದಿ ಮಾಡಿದ್ದರು ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.