ಸಮಗ್ರ ನ್ಯೂಸ್: ಕೆರೆಗೆ ಬಿದ್ದ ಕಾಡಾನೆಯನ್ನು ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬoದಿಗಳಿoದ ರಕ್ಷಣೆ ಮಾಡಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಡಿಕೇರಿಯಂಡ
ಐಯಣ್ಣರವರ ಕೆರೆಗೆ ಬಿದ್ದ ಕಾಡಾನೆಯನ್ನು ವಿರಾಜಪೇಟೆ ಅರಣ್ಯ ವಲಯದ ಸಿಬ್ಬoದಿಗಳು
ಸತತ 3 ಘoಟೆಗಳ ಕಾರ್ಯಾಚರಣೆ ಪ್ರಯತ್ನದಿಂದ ಕಾಡಾನೆಯನ್ನು ರಕ್ಷಣೆ ಮಾಡಲಾಯಿತು.
ಕಾರ್ಯಚರಣೆಯನ್ನು
ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶರಣಬಸಪ್ಪ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಎ. ನೆಹರೂರವರ ಮಾರ್ಗದರ್ಶನದಲ್ಲಿ ಹಾಗೂ ವಿರಾಜಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಕಳ್ಳಿರ. ಎಂ. ದೇವಯ್ಯ ರವರ ನೇತೃತ್ವದಲ್ಲಿ ಉಪ ವಲಯ ಅರಣ್ಯಧಿಕಾರಿಗಳದ ಅನಿಲ್. ಸಿ. ಟಿ. ಸಂಜಿತ್ ಸೋಮಯ್ಯ. ಅರಣ್ಯ ರಕ್ಷಕರಾದ ಮಾಲತೇಶ್ ಬಡಿಗೇರ್ ಹಾಗೂ ಆರ್. ಆರ್. ಟಿ ಸಿಬ್ಬಂದಿಗಳಾದ ಸುರೇಶ, ಅನಿಲ್, ವಿಕಾಸ್, ಮಹೇಶ್, ಲತೇಶ, ಭರತ್, ನಾಣಯ್ಯ, ಸುರೇಶ, ಅಶ್ವಥ್, ನಾಚಪ್ಪ ಹಾಗೂ ವಾಹನ ಚಾಲಕ ಅಶೋಕ್ ರವರು ಈ ಕಾರ್ಯಾಚರಣೆ ವೇಳೆ ಭಾಗವಹಿಸಿದ್ದರು.