ಸಮಗ್ರ ನ್ಯೂಸ್: ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ಅಪಘಾತಕ್ಕೀಡಾದ ಬೆಂಗಳೂರು-ಹೌರ ಸೂಪರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಸದ 110 ಮಂದಿ ಇದ್ದರು. ಈ ಪ್ರಯಾಣಿಕರು ಅದೃಷ್ಟವಶಾತ್ ಮೃತ್ಯು ದವಡೆಯಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ 110 ಜನ ಬೈಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದರು.
ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಇದ್ದರು. ರೈಲು ನಿನ್ನೆ ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್ ಬದಲಿಸಿದೆ. ಇದರಿಂದಾಗಿ ಕೊನೆಯ ಬೋಗಿ ಮೊದಲ ಬೋಗಿಯಾಗಿದೆ. ಕಳಸ ತಾಲೂಕಿನ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ 4 ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಇನ್ನು ಈ ನಿಲ್ದಾಣದ ರೈಲಿನಲ್ಲಿ 1294 ಪ್ರಯಾಣಿಕರು ತೆರಳಿದ್ದರು. 1294 ಪ್ರಯಾಣಿಕರ ಪೈಕಿ 994 ಜನ ಟಿಕೆಟ್ ಬುಕ್ ಮಾಡಿಸಿದ್ದರು.