Ad Widget .

ಪ್ರಪಾತಕ್ಕೆ ಬಿದ್ದ ಹಸುಗಳನ್ನು ರಕ್ಷಿಸಿದ ಮುಸ್ಲಿಂ ಯುವಕರು

ಕೊಪ್ಪಳ: ಗುಡ್ಡದ ಪ್ರಪಾತಕ್ಕಿಳಿದಿದ್ದ ನಾಲ್ಕು ಗೋವುಗಳು ನಾಲ್ಕು ಐದು ದಿನಗಳಿಂದ ಮೇಲಕ್ಕೆ ಬರಲು ಆಗದೆ ಪರದಾಡುತ್ತಿದ್ದವು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ತಂಡ ಶತಪ್ರಯತ್ನ ಮಾಡಿ ಎರಡು ಹಸುಗಳನ್ನು ರಕ್ಷಿಸಿದ್ದು ಎರಡು ಹಸುಗಳು ಹಸಿವಿನಿಂದ ನಿತ್ರಾಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೊಪ್ಪಳ ನಗರದ ಹುಲಿಕೆರೆಯ ಬಳಿಯ ವಳಕಲ್ಲು ಗುಡ್ಡದ ಬಳಿ ಮೇಯಲು ಹೋಗಿದ್ದ ನಾಲ್ಕು ಹಸುಗಳು ಸುಮಾರು 300 ಆಳದ ಪ್ರಪಾತಕ್ಕೆ ಇಳಿದಿದ್ದವು. ನಗರದ ಗೋವು ಶಾಲೆಯಲ್ಲಿ ಗೋವುಗಳು ಐದು ದಿನಗಳ ಹಿಂದೆ ಗುಡ್ಡ ಪ್ರದೇಶದಲ್ಲಿ ಮೇಯಲು ಹೋಗಿದ್ದವು. ಅದರಲ್ಲಿ ನಾಲ್ಕು ಹಸುಗಳು ಹೇಗೆ ಆಳವಾದ ಪ್ರಪಾತಕ್ಕಿಳಿದಿದ್ದವು. ಗೋವು ಶಾಲೆಯಲ್ಲಿ ನೂರಾರು ಗೋವುಗಳಿದ್ದ ಪ್ರಪಾತಕ್ಕಿಳಿದ ಹಸುಗಳ ಬಗ್ಗೆ ಲೆಕ್ಕವಿರಲಿಲ್ಲ.

Ad Widget . Ad Widget . Ad Widget .

ಈ ಮಧ್ಯೆ ಹುಲಿಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಗೆ ದೂರದಲ್ಲಿ ಹಸುಗಳು ಸಿಕ್ಕಿಕೊಂಡಿರುವುದನ್ನು ಗುರುತಿಸಿದ್ದಾರೆ. ಅವುಗಳು ಗುಡ್ಡ ಹತ್ತಿ ಬರಲು ಪರದಾಡುತ್ತಿರುವುದು, ಮೇವು ಇಲ್ಲದೆ ನಿತ್ರಾಣವಾಗಿರುವುದು ಗೊತ್ತಾಗಿ ಪಕ್ಕದ ದಿಡ್ಡಿಕೆರೆಯ ಶೂಕೂರು, ಮೊಹಮ್ಮದ್ ಮಸೂದ್ ಹಾಗೂ 20 ಜನರ ತಂಡ ಹಸುಗಳ ರಕ್ಷಣೆಗೆ ಮುಂದಾದರು. 

ಮಂಜಾನೆಯಿಂದಲೇ ಯುವಕರು ಹಗ್ಗಗಳ ಸಹಾಯದಿಂದ ಪ್ರಪಾತದಲ್ಲಿದ್ದ ಹಸುಗಳನ್ನು ಮೇಲೆ ತರಲು ಕಾರ್ಯಾಚರಣೆ ಮಾಡಿದರು. ಕಠಿಣವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲೆರಡು ಹಸುಗಳನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಕಾರ್ಯಾಚರಣೆ ಮದ್ಯಾಹ್ನದವರೆಗೂ ನಡೆದಿದ್ದು, ಮದ್ಯಾಹ್ನದ ವೇಳೆಗೆ ಯುವಕರು ತೀವ್ರ ನಿತ್ರಾಣವಾದ ಹಸುಗಳಿಗೆ ಆಹಾರ ನೀಡಿ ಮೇಲಕ್ಕೆತ್ತಲು ಯತ್ನಿಸಿದರೂ ಕೊನೆಗೆ ಎರಡು ಆಕಳುಗಳು ಅಲ್ಲಿಯೇ ಸಾವನ್ನಪ್ಪಿವೆ. ದಿಡ್ಡಿಕೆರೆಯ ಈ ಯುವಕರ ತಂಡದ ಸಾಧನೆಯು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ

Leave a Comment

Your email address will not be published. Required fields are marked *