ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಅಪರಿಚಿತ ಗುಂಪೊಂದರಿಂದ ತಲಾವಾರು ದಾಳಿ ನಡೆದಿದೆ. ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಭಯಾನಕ ತಲ್ವಾರ್ ದಾಳಿ ನಡೆದಿದ್ದು ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ.
ಬಜರಂಗದಳ ಪೆರಾಜೆ ಸಂಚಾಲಕ ಮಹೇಂದ್ರ ಮೇಲೆ ಮತ್ತು ಪ್ರಶಾಂತ್ ನಾಯಕ್ ಎಂಬವರ ಹಲ್ಲೆ ನಡೆದಿದೆ. ಈ ಹುಡುಗರು ಕೆಲಸ ಮುಗಿಸಿ ಮನೆಗೆ ಹೋಗುತ್ತಾ ಇರುವಾಗ ಅಟ್ಯಾಕ್ ನಡೆದಿದೆ.
ಮೊದಲು ಇವರು ಸಾಗುತ್ತಿದ್ದ ವಾಹನಕ್ಕೆ ಓಮ್ನಿ ಗಾಡಿಯಲ್ಲಿ ಡಿಕ್ಕಿ ಹೊಡೆಯಲಾಗಿದೆ. ನಂತರ ತಲ್ವಾರ್ ದಾಳಿ ನಡೆದಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.