ಮಂಗಳೂರು: 10 ರೂ. ಪಾವತಿಸಲು ಹೋಗಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ನಿವಾಸಿಯೊಬ್ಬರಿಗೆ ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ್ದ. ಆತ ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿಗೊಂಡಿದ್ದ. 9339431456 ದೂರವಾಣಿ ಸಂಖ್ಯೆಯಿoದ ಕರೆ ಮಾಡಿ ತಮ್ಮ ಹೆಸರಿಗೊಂದು ಕೊರಿಯರ್ ಬಂದಿದ್ದು ಅದರಲ್ಲಿ ನಿಮ್ಮ ವಿಳಾಸದ ಪಿನ್ ತಪ್ಪಾಗಿ ನಮೂದಿಸಲಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ. ಇದರೊಂದಿಗೆ ಹಣ ಪಾವತಿಸಲು ಲಿಂಕ್ ಕಳುಹಿಸಿದ್ದಾನೆ.
ಲಿಂಕ್ ತೆರೆದು ಯುಪಿಐ ಪಿನ್ ನಮೂದಿಸಿ 10 ರೂ. ಪಾವತಿಸಿದ ಬಳಿಕ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಕೆನರಾ, ಎಸ್‌ಬಿಐ, ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಂದ ಹಂತ ಹ0ತವಾಗಿ 169,600ರೂ. ವರ್ಗಾವಣೆಯಾಗಿದ್ದು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.
ಪ್ರೀಯ ಓದುಗರೆ ಇಂತಹ ವಂಚನೆಗಳು ಹಲವು ದಿನಗಳಿಂದ ನಡೆಯುತ್ತಲೇ ಇದೆ. ಈ ವಂಚನೆಗಳಿಗೆ ಜನಸಾಮಾನ್ಯರು ಹೆಚ್ಚು ಬಲಿಯಾಗುತ್ತಿದ್ದಾರೆ. ನಾವು ಹೇಳುವುದು ಇಷ್ಟೆ ಯಾವುದೇ ಅನ್ಯ ಕರೆಗಳು ಬಂದಲ್ಲಿ ನಿಮ್ಮ ಗುಪ್ತ ಮಾಹಿತಿಯನ್ನು ಹಂಚಿಕೊಳ್ಳದಿರಿ. ಗೆಳೆಯರು ಆಥವಾ ಸಂಭಂದಿಕರ ಹೆಸರಿನಲ್ಲಿ ಮೆಸೇಜ್ ಆಥವಾ ಕರೆಗಳು ಬಂದು, ಅವರು ನಿಮ್ಮಲ್ಲಿ ಹಣ ಅವಶ್ಯಕತೆ ಇದೆ ಎಂದು ಕೇಳಿದಾಗ ತಕ್ಷಣ ಅವರು ನೀಡಿದ ನಂಬರ್‌ಗೆ ಹಣ ಕಳುಹಿಸುವ ಮೊದಲು ನಿಮ್ಮ ಸಂಬoಧಿಕರೇನಾ ಎಂದು ಮತ್ತೊಮ್ಮೆ ಖಚಿತ ಪಡಿಸಿಕೊಳ್ಳಿ.