Ad Widget .

ಸುಳ್ಯ: ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ವಿಧ್ಯುಕ್ತ ತೆರೆ| ಮೂರು ದಿನಗಳ ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದ ಭಕ್ತಗಣ

ಸಮಗ್ರ ನ್ಯೂಸ್: ಕಲಿಯುಗದ ಪ್ರತ್ಯಕ್ಷ ದೈವನೆನಿಸಿದ ಶ್ರೀ ವಯನಾಟ್ ಕುಲವನ್ ಕೋಲ ರೂಪದಲ್ಲಿ ಅವತರಿಸಿ, ನೆರೆದ ಭಕ್ತ ಸಮೂಹಕ್ಕೆ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವ ಅಭಯ ನೀಡಿದ್ದು, ಕೋಲ್ಚಾರಿನಲ್ಲಿ ಮೂರು ದಿನಗಳ ದೈವಂಕಟ್ಟು ಮಹೋತ್ಸವ ಸಂಪನ್ನವಾಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲಗಳ ಸಮಾಗಮವಾಗುವುದರೊಂದಿಗೆ ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಭಕ್ತಿ ಸಂಭ್ರಮದ ತೆರೆಯಾಯಿತು.

Ad Widget . Ad Widget . Ad Widget .

ಸುಳ್ಯ ತಾಲೂಕಿನ ತೊಡಿಕಾನ ಸೀಮೆಗೆ ಒಳಪಟ್ಟ ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ಗ್ರಾಮ ದೇವರ ಹಾಗೂ ಕುತ್ತಿಕೋಲ್ ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿರುವ ಕೇರಳ ಗಡಿಪ್ರದೇಶವಾದ ಕೋಲ್ದಾರು ಮಣೆಗಾರಜ್ಜನ ವಂಶಸ್ಥರ ತರವಾಡಿನ ದೈವ ಸನ್ನಿಧಿಯಲ್ಲಿ ಮೇ.16ರಂದು ಆರಂಭಗೊಂಡು ಮೂರು ದಿನಗಳ ಕಾಲ ವಿವಿಧ ದೈವಗಳು ಕೋಲ ರೂಪದಲ್ಲಿ ವಿಜ್ರಂಭಿಸಿ ಭಕ್ತರನ್ನು ಭಕ್ತಿ ಭಾವದ ಸಂಭ್ರಮದಲ್ಲಿ ತೇಲಾಡಿಸಿತು. ಅರ್ಧ ಶತಮಾನಗಳ ಬಳಿಕ ನಡೆದ ಉತ್ಸವ ಗಡಿ ಗ್ರಾಮದಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಕೇರಳ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರ ಗಡಣವೇ ಆಗಮಿಸಿ ಉತ್ಸವಕ್ಕೆ ಸಾಕ್ಷಿಯಾದರು. ಮೇ.18ರಂದು ಬೆಳಗ್ಗಿನಿಂದ ಕಾರ್ನೊನ್ ದೈವ, ಕೊರಚ್ಛನ್ ದೈವ, ಅತ್ಯಂತ ವಿಶೇಷವಾದ ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು. ಚೆಂಡೆ ಮೇಳದ ಅಬ್ಬರದ ಮಧ್ಯೆ ವೈಭವೋಪೇತವಾಗಿ ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ಮಾಡಿ ಭಕ್ತ ಸಮೂಹವನ್ನು ಹರಸಿತು. ವಯನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ ದೈವಗಳ ಅಪೂರ್ವ ಸಮಾಗಮವೂ ನಡೆದು ದೈವಗಳು ಭಕ್ತ ಸಮೂಹವನ್ನು ಹರಸಿತು.

ರಾತ್ರಿ ದೈವಂಕಟ್ಟು ಮಹೋತ್ಸವಕ್ಕೆ ಸಮಾಪ್ತಿಯಾಗಿ ಮರ ಪಿಳರ್ಕಲ್ ನಡೆಯಿತು. ಕೈವೀದ್‌ನೊಂದಿಗೆ ಉತ್ಸವಕ್ಕೆ ತೆರೆಯಾಯಿತು. ದೈವಸ್ಥಾನದ ಆಡಳಿತ ಸಮಿತಿ ಅದ್ಯಕ್ಷ ಪುರುಷೋತ್ತಮ ಕೋಲ್ಚಾರು, ಶ್ರೀ ತಂಬುರಾಟಿ ಭಗವತಿ ಕ್ಷೇತ್ರ, ಕುತ್ತಿಕೋಲು ಆಡಳಿತ ಮಂಡಳಿ ಅಧ್ಯಕ್ಷ ಕುಂಞಿಕಣ್ಣ ಬೇಡಗ ,ಉತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ ಕುಟುಂಬದ ಯಜಮಾನ ಕೂಸಪ್ಪ ಗೌಡ ಕೋಲ್ಚಾರು , ಸಂಚಾಲಕರಾದ
ಸೋಮಶೇಖರ ಕೊಯಿಂಗಾಜೆ, ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೊಯಿಂಗಾಜೆ ಉಪಾಧ್ಯಕ್ಷರುಗಳಾದ, ರೂಪಾನಂದ ಕೋಲ್ಚಾರು , ಶಿವಣ್ಣ ಕೋಲ್ಚಾರು, ಶ್ಯಾಮ ಸುಂದರ ಕೋಲ್ಚಾರು ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು
ಕೋಶಾಧಿಕಾರಿ ಶಿವಪ್ರಸಾಧ್ ಕೋಲ್ಚಾರು, ಆಡಳಿತ ಸಮಿತಿ ಕಾರ್ಯದರ್ಶಿ ರಾಮಪ್ಪ ಮಾಸ್ತರ್ ಕೋಲ್ಚಾರು, ಆಡಳಿತ ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು, ಶ್ರಿ ತಂಬುರಾಟಿ ಭಗವತಿ ಆಲೆಟ್ಟಿ ಪ್ರಾದೇಶಿಕ ಸಮಿತಿ ಅದ್ಯಕ್ಷ ನಾರಾಯಣ ಬಾರ್ಪಣೆ ,ಸ್ಥಾನದ ಮನೆ ಅರ್ಚಕ ದಾಮೋದರ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು, ಕಾರ್ಯದರ್ಶಿ ನಾಗವೇಣಿ ಕೋಲ್ಚಾರು, ಖಜಾಂಜಿ ಗೋವರ್ಧಿನಿ ಕೋಲ್ಚಾರು, ಹಾಗೂ ಉಪಸಮಿತಿಗಳ ಸದಸ್ಯರುಗಳು, ಕೋಲ್ಚಾರು ಕುಟುಂಬಸ್ಥರು ಇದ್ದರು.

Leave a Comment

Your email address will not be published. Required fields are marked *