ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ನಡೆದ ರಾಜಕೀಯ ಪ್ರೇರಿತ ದೌರ್ಜನ್ಯದ ಬಗ್ಗೆ ಆಮ್ ಆದ್ಮಿ ಪಾರ್ಟಿ ಖಂಡಿಸಿರುವುದಾಗಿ ಮಾದ್ಯಮಕ್ಕೆ ತಿಳಿಸಿದ್ದಾರೆ. ಕರಾವಳಿಯಲ್ಲಿ ಮತ ದ್ವೇಷ ರಾಜಕಾರಣ ಹೆಚ್ಚಾಗಿದ್ದು, ಜಾತಿ ರಾಜಕಾರಣಕ್ಕೆ ಕಾಲಿಟ್ಟು ಇದೀಗ ಪುತ್ತೂರಿನಲ್ಲಿ ರಾಜಕಾರಣಿಗಳ ಆಡಳಿತ, ಭ್ರಷ್ಟಾಚಾರ, ನಿರ್ಲಕ್ಷ ವಿರೋಧಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ ಪ್ರಕರಣದಲ್ಲಿ, ಅತ್ಯಂತ ಹೀನಾಯವಾಗಿ ದೈಹಿಕ ಹಲ್ಲೆ ಮತ್ತು ಮಾನಸಿಕ ಹಿಂಸೆ ನೀಡಲ್ಪಟ್ಟ ಘಟನೆ ಅತ್ಯಂತ ಖಂಡನೀಯವಾಗಿದೆ.
ರಾಜಕೀಯ ಕಾರಣಕ್ಕಾಗಿ ಧರ್ಮ, ಜಾತಿ ಮತ್ತು ಪಕ್ಷದ ದೃಷ್ಟಿಯಿಂದ ಕಾನೂನಿನ ದುರುಪಯೋಗ ಮಾಡುವ ಮೂಲಕ ಯಾವುದೇ ರೀತಿಯ ಹಲ್ಲೆ, ಹಿಂಸೆಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ.
ಪುತ್ತೂರಿನಲ್ಲಿ ನಡೆದ ದೌರ್ಜನ್ಯದ ಬಗ್ಗೆ ಕೂಲಕುಂಶ ತನಿಖೆ ನಡೆಸಿ ಕ್ಷುಲ್ಲಕ ವಿಚಾರದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡ ಪೋಲಿಸ್ ಇಲಾಖೆ ಅಧಿಕಾರಿಗಳನ್ನು ಮತ್ತು ಇದಕ್ಕೆ ಒತ್ತಡ ಹೇರಿದ ರಾಜಕೀಯ ಕೃತ್ಯ ಹಾಗೂ ಇಂತಹ ಭೀತಿ ಹುಟ್ಟಿಸುವ ಘಟನೆ ಮರುಕಳಿಸದಂತೆ, ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ ಎಂದು ದಕ್ಷಿಣ ಕನ್ನಡ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಅಶೋಕ ಎಡಮಲೆ ಮಾಧ್ಯಮಕ್ಕೆ ತಿಳಿಸಿದ್ದಾರೆ.