Ad Widget .

ಸುಳ್ಯ: ಜೀವಬಲಿಗಾಗಿ ಕಾಯುತ್ತಿವೆ ಮೆಸ್ಕಾಂ ವಿದ್ಯುತ್ ಕಂಬಗಳು

ಸಮಗ್ರ ನ್ಯೂಸ್: ವಿದ್ಯುತ್ ಕಂಬಗಳು ತುಕ್ಕು ಹಿಡಿದು ಧರೆಗುರುಳುವ ಸ್ಥಿತಿಯಲ್ಲಿರುವುದು ಸುಳ್ಯ ನಗರದ ಕೆಲವು ಕಡೆಗಳಲ್ಲಿ ಕಂಡುಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯ ನಗರದ ವಿವೇಕಾನಂದ ಸರ್ಕಲ್ ಬಳಿ ಅಂಬೆಟಡ್ಕ ಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗಳಿಗೆ ಅಳವಡಿಸಿರುವ ಕಂಬಗಳು ತುಕ್ಕು ಹಿಡಿದಿರುವುದು ಕಂಡುಬಂದಿದೆ. ಇಲ್ಲಿ ಹೈ ವೋಲ್ಟೇಜ್ ವಿದ್ಯುತ್ ಹಾದುಹೋಗುವುದರಿಂದ ಇದರಿಂದ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಾಗಿದೆ.

Ad Widget . Ad Widget . Ad Widget .

ಮುಂದಿನ ದಿನಗಳಲ್ಲಿ ಅತಿಯಾದ ಗಾಳಿ ಮಳೆ ಬರುವುದರಿಂದ ಈ ಕಂಬಗಳು ತುಂಡಾಗಿ ನೆಲಕ್ಕೆ ಉರುಳುವ ಸಂಭವ ಕೂಡ ಇದೆ. ಈ ರಸ್ತೆಯಲ್ಲಿ ದಿನದಲ್ಲಿ ವಿದ್ಯಾಥಿಗಳು ಸೇರಿದಂತೆ ಸಾವಿರಾರು ಮಂದಿ ನಡೆದುಕೊಂಡು ಆಥವ ವಾಹನಗಳಲ್ಲಿ ಸಂಚರಿಸುತ್ತಾರೆ.

ಈ ತುಕ್ಕು ಹಿಡಿದ ಕರೆಂಟ್ ಕಂಬದಿಂದ ಮುಂದಿನ ದಿನಗಳಲ್ಲಿ ಬಹು ದೊಡ್ಡ ಸಮಸ್ಯೆ ಉಂಟಾಗಿ ಸಾವು ನೋವು ಸಂಭವಿಸುವ ಬದಲು ತಕ್ಷಣ ಈ ಬಗ್ಗೆ ಮೆಸ್ಕಾಂ ಇಲಾಖೆ ಗಮನಿಸಿ ಕಂಬವನ್ನು ಬದಲಾಯಿಸಬೇಕಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಇಂತ ಸಮಸ್ಯೆ ಇರುವುದರಿಂದ ಇದನ್ನು ಕೂಡ ಗಮನಿಸಿ ಸರಿಪಡಿಸಬೇಕಾಗಿದೆ. ಇದೊಂದು ಸಮಸ್ಯೆಯಾದರೆ ಇನ್ನು ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ಕಾಡುಬಳ್ಳಿಗಳಿಂದ ಸುತ್ತುವರೆದಿದೆ ಹಾಗಾಗಿ ಮೆಸ್ಕಾಂ ಇಲಾಖೆ ಇದನ್ನು ಕೂಡ ಗಮನಿಸಬೇಕಾಗಿದೆ.

Leave a Comment

Your email address will not be published. Required fields are marked *