ಸಮಗ್ರ ನ್ಯೂಸ್: ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಬರೆ ಎಳೆಯಲಾಗಿದೆ. ಪ್ರತಿ ಯೂನಿಟ್ ವಿದ್ಯುತ್‌ಗೆ 140 ಪೈಸೆ ಏರಿಕೆಗೆ ಎಸ್ಕಾಂ ಸಂಸ್ಥೆ ಮನವಿ ಮಾಡಿತ್ತು. ಆದರೆ ಪ್ರತಿ ಯೂನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ. ಏಪ್ರಿಲ್ 1, 2023ರಿಂದ ಅನ್ವಯ ಆಗುವಂತೆ ನೂತನ ದರ ಏರಿಕೆ ಮಾಡುವುದಾಗಿ KERC ಹೇಳಿದೆ.
‘ಮತದಾರರಿಗೆ ಬಿಗ್ ಶಾಕ್’
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಈಗಷ್ಟೇ ಮುಗಿದಿದೆ. ನಾಳೆ ಮತಎಣಿಕೆ ನಡೆಯಲಿದ್ದು ಮಹತ್ವದ ಫಲಿತಾಂಶ ಹೊರ ಬೀಳಲಿದೆ. ಚುನಾವಣಾ ಪ್ರಚಾರದ ಮಧ್ಯೆ ವಿವಿಧ ಪಕ್ಷಗಳು ಮತದಾರರಿಗೆ ಹಲವು ಭರವಸೆಗಳನ್ನ ಕೊಟ್ಟಿದ್ದರು. ಪ್ರಮುಖವಾಗಿ ಕಾಂಗ್ರೆಸ್ ನಾಯಕರು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿಯನ್ನೇ ಕೊಟ್ಟಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ. ಈ ತಿಂಗಳು ನಾವು ನಮ್ಮ ಮನೆಯ ಕರೆಂಟ್ ಬಿಲ್ ಕಟ್ಟೋದಾ ಬೇಡ್ವಾ ಅಂತಾನೇ ಹಲವಾರು ಜನ ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯ ಈ ಭರವಸೆಯ ಮಧ್ಯೆ ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆ ಬರೆ ಎಳೆಯಲಾಗಿದೆ.