ಸಮಗ್ರ ನ್ಯೂಸ್: ರಾಮಾಚಾರಿ ಧಾರಾವಾಹಿಯ ರಾಮಾಚಾರಿ ತಾಯಿಯಾಗಿ ಅಭಿನಯಿಸುತ್ತ ಜನರ ಮನ ಗೆದ್ದ ಅಂಜಲಿಯವರು ಕನಕಪುರದಲ್ಲಿ ಹುಟ್ಟಿ ಬೆಳೆದ ಇವರು ಸಿನಿರಂಗಕ್ಕೆ ಬಂದಿದ್ದು ಒಂದು ವಿಸ್ಮಯವೇ ಸರಿ.
ಕಂಕಣ ಭಾಗ್ಯದಲ್ಲಿ ತಂಗಿಯ ಪಾತ್ರದಲ್ಲಿ ಚಂದನವನದ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕಾಶೀನಾಥ್ ಅವರಿಂದ ಪೂರ್ಣ ಪ್ರಮಾಣದ ನಾಯಕಿಯಾಗಿ ಆವಂತರದಲ್ಲಿ ನಟಿಸಿದರು. ಮುಂದೆ ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್, ಅನಂತನಾಗ್, ಜಗ್ಗೇಶ್,ಅವರ ಜೊತೆ ನಟಿಸಿದ್ದು ಪುಣ್ಯ ಹಾಗೂ ಅದೃಷ್ಟವೇ ಸರಿ ಎನ್ನುತ್ತಾರೆ ಅಂಜಲಿಯವರು. ‘ತರ್ಲೆ ನನ್ ಮಗ’, ‘ಉಂಡು ಹೋದ ಕೊಂಡು ಹೋದ’, ‘ನೀನು ನಕ್ಕರೆ ಹಾಲು ಸಕ್ಕರೆ,ಅವನೇ ನನ್ನ ಗಂಡ’, ‘ಹೆಂಡ್ತಿಘೆಳ್ಬೇಡಿ’, ‘ಗಣೇಶನ ಮದುವೆ’, ‘ತುಂಬಿದ ಮನೆ’, ‘ಅಪ್ಪ ನಂಜಪ್ಪ ಮಗ ಗುಣಜಪ್ಪ’ ಮುಂತಾದ ಚಲನಚಿತ್ರದಲ್ಲಿ ನಟಿಸಿ ಜನರ ಮನಸ್ಸೇಳೆದಿದ್ದಾರೆ.
1998 ರಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಪತಿ ಸುಧಾಕರ್ ಅವರೊಂದಿಗೆ ದುಬೈ ಅಲ್ಲಿ ದಾಂಪತ್ಯ ಜೀವನವನ್ನು ನಡೆಸಿದರು. ಇಪ್ಪತ್ತ್ತೊಂದು ವರ್ಷಗಳ ಬಳಿಕ ಮತ್ತೆ ಕಿರುತೆರೆಯ ನೇತ್ರಾವತಿ ಧಾರವಾಹಿಯ ಮೂಲಕ ಜನರ ಮನ ತಲುಪಿದರು. ನಂತರದಲ್ಲಿ ರಾಮಾಚಾರಿ ಧಾರವಾಹಿಯ ರಾಮಾಚಾರಿಯ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.
ವಿನಯ್ ಬಳಂಜ ಅವರ ಸಾರಥ್ಯದ “ಬೇರ” ಚಲನಚಿತ್ರದಲ್ಲಿ ಶಾರದಾ ಎನ್ನುವ ಪಾತ್ರದ ಮೂಲಕ ಮಂಜುನಾಥ್ ಹೆಗ್ಡೆ ಯವರ ಪತ್ನಿಯಾಗಿ ಇಪ್ಪತ್ತೊಂದು ವರ್ಷದ ಬಳಿಕ “ಬೇರ” ಚಿತ್ರದಲ್ಲಿ ಮತ್ತೆ ಚಂದನವನದಲ್ಲಿ ಕಾಣಿಸಿಕೊಂಡಿದ್ದಾರೆ .
ಹಲವು ವರ್ಷಗಳ ನಂತರ ನಟಿಸಿದ ಮೊದಲನೇ ಚಿತ್ರ ಎನ್ನುವ ಹೆಮ್ಮೆ ಇದೆ. ದಿವಾಕರ್ ದಾಸ್ ನೆರ್ಲಾಜೆಯವರು ವಿಭಿನ್ನವಾದ ಕತೆಯೊಂದಿಗೆ ಅತ್ಯದ್ಭುತ ಪ್ರಯತ್ನವನ್ನು ಮಾಡಿದ್ದಾರೆ. ಈ ತಂಡದ ಜೊತೆ ಮತ್ತೆ ಅವಕಾಶ ಸಿಕ್ಕರೆ ಖಂಡಿತ ಅಭಿನಯಿಸುತ್ತೇನೆ ಎಂದಿದ್ದಾರೆ ನಟಿ ಅಂಜಲಿ.