Ad Widget .

ಆಸ್ಪತ್ರೆಯೊಳಗಿಂದ ರೋಗಿ ನಿಗೂಢ ನಾಪತ್ತೆ | ಪೊಲೀಸರನ್ನೆ ಬೆಚ್ಚಿ ಬೀಳಿಸಿದ ಪ್ರಕರಣ

ಚೆನ್ನೈ: ಆಸ್ಪತ್ರೆಯಿಂದ ಕಣ್ಮರೆಯಾದ ರೋಗಿಯೊಬ್ಬರ ನಾಪತ್ತೆ ಪ್ರಕರವೂ ನಿಗೂಢ ಕೊಲೆ ಪ್ರಕರಣದ ತಿರುವು ಪಡೆದುಕೊಂಡು ಮೂರನೇ ಮಹಡಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆಸ್ಪತ್ರೆಗೆ ದಾಖಲಾಗಿ, ಕಾಣೆಯಾಗಿ ಕೊಲೆಯಾದವರನ್ನು ಸುಮಿತಾ (41) ಎಂದು ಗುರುತಿಸಲಾಗಿದೆ. ಈಕೆ ಮೇ 23ರಂದು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಆಕೆಯ ಪತಿ ಮೌಲಿ ಮೇ. ೩೧ರಂದು ದೂರು ನೀಡಿರಿದ್ದರು. ತೀವ್ರ ಶೋಧದ ನಡುವೆಯೂ ಆಕೆಯ ಸುಳಿವು ಮಾತ್ರ ಪತ್ತೆಯಾಗಲೇ ಇಲ್ಲ.
ಇದರ ನಡುವೆ ಜೂ.೮ರಂದು ಆಸ್ಪತ್ರೆಯ ಸಿಬ್ಬಂದಿಗೆ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವೊಂದು 3ನೇ ಟವರ್‌ನ 5ನೇ ಮಹಡಿಯಲ್ಲಿ ಪತ್ತೆಯಾಗುತ್ತದೆ. ಇದರ ಬೆನ್ನಲ್ಲೇ ಮೃತದೇಹವೂ ನಾಪತ್ತೆಯಾಗಿದ್ದ ಮಹಿಳೆಯದ್ದೇ ಇರಬೇಕೆಂದು ಸಂಶಯ ವ್ಯಕ್ತಪಡಿಸಲಾಗುತ್ತದೆ. ಬಟ್ಟೆಯನ್ನು ನೋಡಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ತನ್ನ ಪತ್ನಿಯದ್ದೇ ಎಂದು ಮೌಲಿ ಗುರುತು ಹಿಡಿಯುತ್ತಾನೆ.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಾರೆ. ಮೇ 23ರಂದು ಏನು ನಡೆಯಿತು ಎಂದು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ, ಪ್ರಕರಣಕ್ಕೆ ಸಂಬoಧಿಸಿದoತೆ ಗುತ್ತಿಗೆ ಕೆಲಸಗಾರ್ತಿ ರಾಧಿದೇವಿ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ರಾಧಿದೇವಿಗೆ ಹಣದ ಅವಶ್ಯಕತೆ ಇರುತ್ತದೆ. ಈ ವೇಳೆ ಸಣ್ಣ ಚೀಲದಲ್ಲಿ ಹಣ ಸಾಗಿಸುತ್ತಿದ್ದ ಸುಮಿತಾ ಕಣ್ಣಿಗೆ ಬಿದ್ದಿದ್ದಾಳೆ. ಇತ್ತ ಸುಮಿತಾ ಅವರ ಆರೋಗ್ಯವು ಕ್ಷೀಣಿಸುತ್ತಿದೆ ಮತ್ತು ಅವಳನ್ನು ನೋಡಿಕೊಳ್ಳಲು ಯಾರ ಇರಲಿಲ್ಲ ಎಂಬ ವಿಷಯ ಆಕೆಗೆ ತಿಳಿದಿತ್ತು. ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ರಾಧಿದೇವಿ ಸುಮಿತಾಳ ಬಳಿ ಸುಲಿಗೆ ಮಾಡಲು ಸಂಚು ರೂಪಿಸುತ್ತಾಳೆ.

Ad Widget . Ad Widget . Ad Widget .

ಮೇ ೨೨-೨೩ರ ಮಧ್ಯರಾತ್ರಿ 12.30ರ ಸುಮಾರಿಗೆ ಸುಮಿತಾ ಬೆಡ್ ಬಳಿ ರಾಧಿದೇವಿ ಹೋಗಿದ್ದಾಳೆ. ಸ್ಕ್ಯಾನ್ ಮಾಡಿಸಬೇಕೆಂದು ಸುಳ್ಳು ಹೇಳಿ ಕರೆದೊಯ್ಯುಯ್ದಿದ್ದಾಳೆ. ವಾರ್ಡ್ನಿಂದ ವ್ಹೀಲ್‌ಚೇರ್ ಮೂಲಕ ಲಿಫ್ಟ್ ಬಳಿ ಕರೆದೊಯ್ಯುತ್ತಾಳೆ. ಬಳಿಕ ಆಕೆಯ ಸೆಲ್‌ಫೋನ್ ಮತ್ತು ಹಣವನ್ನು ಸುಲಿಗೆ ಮಾಡಿದ ನಂತರ ೮ನೇ ಮಹಡಿಗೆ ಬಲವಂತವಾಗಿ ಎಳದೊಯ್ದು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *