ಸಮಗ್ರ ನ್ಯೂಸ್: ಮಧ್ಯಪ್ರದೇಶದ ಕುನೋ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತಂದಿದ್ದ ಇನ್ನೊಂದು ಹೆಣ್ಣು ಚೀತಾ ‘ದಕ್ಷಾ’ ಮಂಗಳವಾರ ಸಾವು ಕಂಡಿದೆ. ಗಂಡು ಚೀತಾದ ಆಕ್ರಮಣಕಾರಿ ಸಂಭೋಗದ ಕಾರಣದಿಂದಾಗಿ ಚೀತಾ ಸಾವು ಕಂಡಿದೆ ಎಂದು ಹೇಳಲಾಗಿದೆ.
ಕುನೋದಲ್ಲಿ ಕಳೆದ ಎರಡು ತಿಂಗಳಲ್ಲಿ ಸಾವು ಕಂಡ ಮೂರನೇ ಆಫ್ರಿಕಾದ ಚೀತಾ ಇದಾಗಿದೆ. ಕೆಲವು ವಾರಗಳ ಹಿಂದೆ, ಏಪ್ರಿಲ್‌ನಲ್ಲಿ, ದಕ್ಷಿಣ ಆಫ್ರಿಕಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದ ಆರು ವರ್ಷದ ಗಂಡು ಚೀತಾ ಉದಯ್ ಹೃದಯಾಘಾತದಿಂದ ಸಾವು ಕಂಡಿತ್ತು.
ಮಾರ್ಚ್ 27 ರಂದು ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದ ಚೀತಾ ‘ಸಾಶಾ’ ಮೂತ್ರಪಿಂಡದ ಕಾಯಿಲೆಯಿಂದ ಸಾವು ಕಂಡಿತ್ತು.
‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಸ್ಥಳಾಂತರಗೊಂಡ 20 ಚೀತಾಗಳಲ್ಲಿ ಇವೆರಡೂ ಸೇರಿದ್ದವು. ಎಲ್ಲಾ ಚೀತಾಗಳಿಗೆ ಭಾರತೀಯ ಹೆಸರುಗಳನ್ನು ನೀಡಿದ ಎರಡು ದಿನಗಳ ನಂತರ ಅದರ ಸಾವು ಸಂಭವಿಸಿದೆ.