ಸಮಗ್ರ ನ್ಯೂಸ್: ಮೇ 09, ರಾಜ್ಯಾದ್ಯಂತ ನಾಳೆ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಮತದಾರರು ತಮ್ಮ ಮತಗಟ್ಟೆ ವಿಳಾಸ ಎಲ್ಲಿದೆ ಎಂದು ಸುಲಭವಾಗಿ ಹುಡುಕಬಹುದು. ಮತದಾರರಿಗೆ ಅನುಕೂಲ ಆಗುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮತಗಟ್ಟೆಗೆ ಗೂಗಲ್ ಲೊಕೇಶನ್ ಆಧರಿಸಿ ಮತಗಟ್ಟೆ ತಲುಪಬಹುದು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳಲ್ಲಿ ಸಣ್ಣ ಪುಟ್ಟ ಸ್ಥಳಗಳ ಬಗ್ಗೆ ಗೂಗಲ್‌ನಲ್ಲಿಯೂ ಮಾಹಿತಿ ಲಭ್ಯವಾಗದೆ ಮತ್ತು ಅಂತಹ ಸ್ಥಳಗಳನ್ನು ಗೂಗಲ್ ಮ್ಯಾಪ್ ಲಭ್ಯವಿರುವುದಿಲ್ಲ. ಅದಕ್ಕಾಗಿ, ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಎಲ್ಲ 58,545 ಮತಗಟ್ಟೆಗಳ ವಿವರಗಳನ್ನು ತಿಳಿಯಲೂ ವ್ಯವಸ್ಥೆಯನ್ನೂ ಮಾಡಿದೆ. ಮತದಾರರು ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಇಲ್ಲವೇ ಕಾಲ್ ಸೆಂಟರ್‌ಗೆ ಕರೆ ಮಾಡಿ ತಮ್ಮ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
1. ಚುನಾವಣಾ ಅಪ್ಲಿಕೇಶನ್: ಚುನಾವಣಾ ಆಯೋಗವು ಚುನಾವಣಾ ಹೆಸರಿನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಓಪನ್ ಮಾಡಿದಾಗ search by EPIC number ಅಥವಾ Search by Name ಎಂಬ ಎರಡು ಆಯ್ಕೆಯಲ್ಲಿ search by EPIC Number ಆಯ್ಕೆ ಮಾಡಿ ವೋಟರ್ ಐಡಿ ನಂಬರ್ ಹಾಕಿ ಯಾವ ಮತಗಟ್ಟೆಗೆ ಹೋಗಬೇಕು ಎಂಬ ಸಂಪೂರ್ಣ ಮಾಹಿತಿ ಪಡೆಯಬಹುದು. ಅಲ್ಲದೇ ಜಿಪಿಎಸ್ ಮೂಲಕವೂ ಮತಗಟ್ಟೆಯನ್ನು ತಲುಪಬಹುದು. ಈ ಜಿಪಿಎಸ್ ಮ್ಯಾಪ್ ಆಧರಿಸಿ ವಾಹನಗಳಲ್ಲಿ, ಕಾಲ್ನಡಿಗೆಯ ಮೂಲಕವು ಮತಗಟ್ಟೆಯನ್ನು ಸುಲಭವಾಗಿ ಹುಡುಕಬಹುದು.
2. ಚುನಾವಣಾ ವೆಬ್‌ಸೈಟ್: ನಮ್ಮ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಆಗದೆ ಇರುವವರು ಮೊಬೈಲ್‌ನಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಬಳಸಿ ಮತಗಟ್ಟೆಯನ್ನು ಸುಲಭವಾಗಿ ಹುಡುಕಬಹುದು. ಇಲ್ಲಿಯೂ ಸಹ ಮತಗಟ್ಟೆ ತಿಳಿಯಲು EPIC ನಂಬರ್ ಮೂಲಕ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು.
3. ಸಹಾಯವಾಣಿಗೆ ಕರೆ: ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡದವರು ಆ್ಯಪ್ ಮತಗಟ್ಟೆಯ ಮಾಹಿತಿ ತಿಳಿದುಕೊಳ್ಳುವ ಅವಕಾಶ ಒದಗಿಸಲಾಗಿದೆ. ಅದಕ್ಕಾಗಿ ಮತಗಟ್ಟೆ ಮಾಹಿತಿ ಪಡೆಯಲು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರ ತಿಳಿದುಕೊಳ್ಳುವುದು ಸಾಧ್ಯ. ಜೊತೆಗೆ, ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಕ್ಷೇತ್ರದ ಅಭ್ಯರ್ಥಿಯ ಮಾಹಿತಿ, ಪಾರ್ಕಿಂಗ್ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳ ಬಗ್ಗೆ ನಿಖರ ಮಾಹಿತಿ ಪಡೆಯಬಹುದು.
ರಾಜ್ಯದ ಪ್ರತಿಯೊಬ್ಬ ಮತದಾರನು ತನ್ನ ಮತವನ್ನು ಚಲಾಯಿಸಲು ಮುಖ್ಯವಾಗಿ ಮತದಾರರ ಗುರುತಿನ ಚೀಟಿ ಹೊಂದಿದವರು ವೋಟರ್ ಐಡಿ ಇಲ್ಲವೆಂದರೂ ಮತದಾನ ಮಾಡಬಹುದು. ಭಾವಚಿತ್ರವಿರುವ ಯಾವುದೇ ದಾಖಲೆಯನ್ನು ತೋರಿಸಿ ಮತದಾನ ಮಾಡಬಹುದು. ಮತದಾರರು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ಪಾಸ್‌ಬುಕ್, ಅಂಗವಿಕಲ ಕಾರ್ಡ್, ಆಧಾರ್ ಕಾರ್ಡ್ ಮೂಲಕವು ಮತದಾನ ಮಾಡಹುದು.