Ad Widget .

ರಜೆ ನೀಡಿಯೂ ಮತದಾನ ಮಾಡದವರಿಗೆ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ!!

ಸಮಗ್ರ ನ್ಯೂಸ್: ಮೇ.10ರಂದು ರಾಜ್ಯ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಎಲ್ಲಾ ನೌಕರರಿಗೆ ಸಾರ್ವತ್ರಿಕ ರಜೆಯನ್ನು ನೀಡಿ ಆದೇಶಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇದೇ ವೇಳೆಯಲ್ಲಿ ಮತದಾನದ ಮಹತ್ವವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದಿಂದ ಸೂಕ್ತ ನಿರ್ದೇಶನವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಮತದಾನ ಮಾಡದವರಿಗೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶಿಸಿದೆ.

Ad Widget . Ad Widget . Ad Widget .

ಮೇ.10ರಂದು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಾದಂತ ಕೆ ಆರ್ ಎಸ್, ಬೃಂದಾವನ ಗಾರ್ಡನ್, ಮುತ್ತತ್ತಿ, ಶಿವನಸಮುದ್ರ, ರಂಗನತಿಟ್ಟು, ಬಲಮುರಿ, ದರಿಯಾ ದೌಲತ್ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡದೇ ಬರುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಮಂಡ್ಯ ಜಿಲ್ಲಾಡಳಿತದ ಮಾದರಿಯಲ್ಲೇ ಇತರೆ ಜಿಲ್ಲೆಯಲ್ಲಿಯೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತ ಸಾರ್ವಜನಿಕರು ಸೇರಿದಂತೆ ಪ್ರವಾಸಿಗರು ಕರ್ನಾಟಕದವರು ಆಗಿದ್ದರೇ, ಮತದಾನ ಮಾಡದೇ ಇದ್ದರೇ ಪ್ರವೇಶ ನಿರ್ಬಂಧಿಸಲು ಆದೇಶವನ್ನು ಜಿಲ್ಲಾಡಳಿತಗಳು ಹೊರಡಿಸಲಿವೆ. ಹೀಗಾಗಿ ಮತದಾನ ಮಾಡಿಯೇ ಪ್ರವಾಸಕ್ಕೆ ತೆರಳುವುದು ಉತ್ತಮ.

Leave a Comment

Your email address will not be published. Required fields are marked *