Ad Widget .

ಭಜರಂಗದಳ ಭಜರಂಗಬಲಿ ಆಗಿದ್ದೇಗೆ? ಚುನಾವಣಾ ಸಮಯದಲ್ಲಿ ಅಚ್ಚರಿಯ ಬದಲಾವಣೆ ಕುರಿತು ಕಾಂಗ್ರೆಸ್ ಪ್ರಶ್ನೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷದ ಬಜರಂಗದಳ ಸಂಘಟನೆ ನಿಷೇಧ ವಿಚಾರವಾಗಿ ಬಿಜೆಪಿ ಆಕ್ರೋಶ ಭರಿತ ಪ್ರಚಾರ ಮುಂದುವರೆದಿರುವಂತೆ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಪ ಪಿ ಚಿದಂಬರಂ ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.

Ad Widget . Ad Widget .

ರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆ ನಿಷೇಧಿಸುವುದಾಗಿ ಹೇಳಿಲ್ಲ. ಆದರೆ, ದ್ವೇಷ ಬಿತ್ತುವ ಎಲ್ಲ ಸಂಘಟನೆಗಳಿಗೆ ಎಚ್ಚರಿಕೆ ಕೊಡುವ ರೀತಿ ಕಾನೂನಿನಡಿ ನಿರ್ಣಾಯಕ ಕ್ರಮದ ಭರವಸೆ ನೀಡಿದೆ. ಒಂದು ಸಂಘಟನೆ ನಿಷೇಧಿಸುವುದು ನ್ಯಾಯಾಂಗ ಪ್ರಕ್ರಿಯೆ. ಬಜರಂಗದಳವು ಬಜರಂಗಬಲಿ ಆಗಿದ್ದೇಗೆ ಎನ್ನುವುದೇ ನನಗೆ ಅಚ್ಚರಿ.

Ad Widget . Ad Widget .

ಈ ‘ಮಾಂತ್ರಿಕ ರೂಪಾಂತರ’ ವಿವರಿಸಬಹುದೇ? ಬಜರಂಗದಳವನ್ನು ಬಜರಂಗಬಲಿಗೆ ಸಮೀಕರಿಸಿರುವುದು ಸರಿಯೇ’ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

‘ಕರ್ನಾಟಕವು ಉದಾರವಾದಿ, ಪ್ರಜಾಸತ್ತಾತ್ಮಕ, ಬಹುಸಂಖ್ಯಾತ, ಸಹಿಷ್ಣು ಮತ್ತು ಪ್ರಗತಿಪರ ರಾಜ್ಯ. ಇದನ್ನು ಪ್ರತಿಪಾದಿಸುವವರು ಬೇಕಾ ಅಥವಾ ಸರ್ವಾಧಿಕಾರ, ಅಸಹಿಷ್ಣುತೆ ಪ್ರತಿಪಾದಿಸುವವರು ಬೇಕಾ?

ಎನ್ನುವುದನ್ನು ರಾಜ್ಯದ ಜನರು ಆಯ್ಕೆ ಮಾಡುವಷ್ಟು ಬುದ್ಧಿವಂತರಿದ್ದಾರೆ. ಪ್ರಜಾಪ್ರಭುತ್ವಕ್ಕಾಗಿ ಮತ್ತು ಕರ್ನಾಟಕದ ಭವಿಷ್ಯಕ್ಕಾಗಿ, ಬಿಜೆಪಿ ಗೆಲ್ಲದಂತೆ ನಾವು ತಡೆಯಬೇಕು ಮತ್ತು ಇಲ್ಲಿನ ಗೆಲುವನ್ನು ನೆರೆಯ ರಾಜ್ಯಗಳಲ್ಲಿ ಹೋರಾಟಕ್ಕೆ ನಾವು ಬಳಸಿಕೊಳ್ಳಬೇಕು’ ಎಂದರು

Leave a Comment

Your email address will not be published. Required fields are marked *