ಅಲಹಾಬಾದ್: ಅಪ್ರಾಪ್ತ ಬಾಲಕನೋರ್ವ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಒಂದು ಮಗುವನ್ನು ಕೂಡ ಮಾಡಿದ್ದಾನೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇವರ ದಾಂಪತ್ಯ ಜೀವನಕ್ಕೆ ತಡೆಯಾಜ್ಞೆ ನೀಡಿದ ಘಟನೆ ಅಲಹಾಬಾದ್ ರಾಜ್ಯದಲ್ಲಿ ನಡೆದಿದೆ.
ಆತ 16 ವರ್ಷದ ಬಾಲಕ ಆಕೆ ಈತನಿಗಿಂತ ಅದೆಷ್ಟೋ ದೊಡ್ಡ ಮಹಿಳೆ. ಇವರಿಬ್ಬರಿಗೆ ಹಲವು ದಿನಗಳ `ರೋಮಿಯೋ ಜೂಲಿಯೆಟ್’ನಂತಹ ಪ್ರೀತಿ. ಇವರ ಪ್ರೀತಿಗೆ ಬಾಲಕನ ಪೋಷಕರು ವಿರೋಧಿಗಳು. ಈ ವಿರೋಧದ ನಡುವೆ ಇವರಿಬ್ಬರು ಮದುವೆ ಆಗಿದ್ದಲ್ಲದೆ ಬಾಲಕ ತನ್ನ ಪ್ರಯತ್ನದಿಂದ ಒಂದು ಮಗು ಕೂಡ ಮಾಡಿದ್ದಾನೆ. ಅದರೆ ಬಾಲಕನ ತಾಯಿಗೆ ಇದ್ಯಾವುದು ಇಷ್ಟವಾಗದೆ, ವಿರೋಧಿಸಿದಲ್ಲದೆ ಅನೂರ್ಜಿಗೊಳಿಸುವ ಉದ್ದೇಶದಿಂದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಾಲಕ ಮಗುವನ್ನು ಹಿಡಿದು ಮುದ್ದಾಡುತ್ತಿರುವಾಗ ಕೋರ್ಟ್ ಇವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಪ್ರಾಪ್ತ ವಯಸ್ಸಿನಲ್ಲಿ ಮದುವೆಗೆ ಅವಕಾಶವಿಲ್ಲ ಎಂದು ಪರಿಗಣಿಸಿತ್ತು, ಆತನಿಗೆ ಶಾಖ್ ನೀಡಿತ್ತು. ಅದರೆ ಬಾಲಕ ನಮ್ಮಮ್ಮಿಬ್ಬರದು ಹಲವು ದಿನಗಳ ಪ್ರೇಮ. ಈ ಪೇಮದ ಫಲಶೃತಿಯಾಗಿ ಒಂದು ಮಗು ಕೂಡ ಜನಿಸಿದೆ. ಹಾಗಾಗಿ ನಾನು ಪೋಷಕರ ಬಳಿ ಹೋಗಾಲಾರೆ. ತನ್ನ ಪ್ರೀತಿಯ ಪತ್ನಿ ಜೊತೆಯೇ ಮುಂದುವರಿಯುವೇ ಎಂದಿದ್ದಾನೆ.
ನ್ಯಾಯಮೂರ್ತಿಗಳು ಬಾಲಕನ ವಾದವನ್ನು ಒಪ್ಪದೆ, ಪೋಕ್ಸೋ ಕಾಯ್ದೆ ಅಡಿ ಇದು ಅಪರಾಧವಾಗಿರುವ ಕಾರಣ ಮದುವೆಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದಿದ್ದಾರೆ. ಆದರೆ ಬಾಲಕ ಪಾಲಕರ ಬಳಿ ಹೋಗಲು ಇಚ್ಛಿಸದ ಕಾರಣ ಆತನನ್ನು ಬಾಲಮಂದಿರದಲ್ಲಿ ಇರಿಸುವಂತೆ ನ್ಯಾಯಮೂರ್ತಿ ಜೆ.ಜೆ.ಮುನೀರ್ ಹೇಳಿದ್ದು, ಆತನಿಗೆ ಕಾನೂನುರೀತ್ಯಾ ಮದುವೆಯ ವಯಸ್ಸು ಆದ ಮೇಲೆ ಬೇಕಿದ್ದರೆ ಪತ್ನಿಯ ಜತೆ ವಾಸಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.