ಇಂದು(ಮೇ.6) ಪುತ್ತೂರಿಗೆ ಯುಪಿ ಸಿಎಂ ಯೋಗಿ| ಸ್ವಾಗತ ಕೋರಿ ಪಕ್ಷೇತರ ಅಭ್ಯರ್ಥಿ ಪುತ್ತಿಲ ಬ್ಯಾನರ್; ಬಿಜೆಪಿಯಿಂದ ದೂರು

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಬಿಜೆಪಿಗೆ ಠಕ್ಕರ್ ಕೊಡುತ್ತಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ದ ಇದೀಗ ಬಿಜೆಪಿ ಗರಂ ಆಗಿದ್ದು ಚುನಾವಣಾಧಿಕಾರಿಗೆ ದೂರು ನೀಡಿದೆ. ಪುತ್ತೂರು ಹೈವೋಲ್ಟೆಜ್ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಪುತ್ತಿಲರನ್ನು ಸೊಲೀಸಲು ಇದೀಗ ಬಿಜೆಪಿ ಸ್ಟಾರ್ ಕ್ಯಾಂಪೈನರ್ ಗಳನ್ನು ನೆಚ್ಚಿಕೊಂಡಿದ್ದು, ಈಗ ಪುತ್ತೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಿಸುತ್ತಿದ್ದಾರೆ.

Ad Widget .

ಇನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಗತ ಕೋರಿ ಪೋಸ್ಟರ್ ಹಾಕಿದ ಪಕ್ಷೇತರ ಅಭ್ಯರ್ಥಿ ವಿರುದ್ದ ಬಿಜೆಪಿ ಕಿಡಿ ಕಾರಿದ್ದು, ಇದೀಗ ಪುತ್ತೂರು ಚುನಾವಣಾಧಿಕಾರಿಗೆ ಈ ಬಗ್ಗೆ ದೂರು ನೀಡಿದೆ.

Ad Widget . Ad Widget .

ಪುತ್ತೂರು ಬಿಜೆಪಿ ಅಭ್ಯರ್ಥಿ ಪರವಾಗಿ ಅವರ ಏಜೆಂಟ್ ರಾಜೇಶ್ ಬನ್ನೂರು ದೂರು ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿ ನಮ್ಮ ತಾರಾ ಪ್ರಚಾರಕರನ್ನು ಕಾನೂನು ಬಾಹಿರವಾಗಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳು ತಿರುವುದನ್ನು ನಿರ್ಭಂಧಿಸುವಂತೆ ದೂರು ನೀಡಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್‌ ಪುತ್ತಿಲ ಬಿಜೆಪಿಯ ತಾರಾ ಪ್ರಚಾರಕರನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಪ್ರಚಾರವನ್ನು ಮಾಡುವ ಬಗ್ಗೆ ಈಗಾಗಲೇ 2 ಬಾರಿ ಬಿಜೆಪಿ ದೂರು ನೀಡಿದೆ.

ಇದರ ಮಧ್ಯೆ ನಾಳೆ ಬಿಜೆಪಿ ತಾರಾ ಪ್ರಚಾರಕರಾದ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಲಿದ್ದು, ಅವರನ್ನು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಸ್ವಾಗತಿಸುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕೂಡಲೇ ಅರುಣ್ ಕುಮಾರ್ ಪುತ್ತಿಲ ಅಥವಾ ಅವರ ಅಭಿಮಾನಿಗಳ ಹೆಸರಿನಲ್ಲಿ ಈ ಜಾಹೀರಾತನ್ನು ನೀಡದಂತೆ ಸಂಬಂಧ ಪಟ್ಟ ಪತ್ರಿಕೆಗಳಿಗೆ ಕೂಡಲೇ ನೋಟಿಸನ್ನು ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಬಿಜೆಪಿ ದೂರು ನೀಡಿದೆ.

Leave a Comment

Your email address will not be published. Required fields are marked *