ಸಮಗ್ರ ವಿಶೇಷ: ಇದು ಹಿಂದೂಗಳ ಪಕ್ಷ, ಅದು ಮುಸ್ಲಿಮರ ಪಕ್ಷ ಅಂತ ಏನಾದ್ರೂ ಇದ್ಯಾ..!? ಹಿಂದುತ್ವ ಅಂದ್ರೆ ಬಿಜೆಪಿ, ಕಾಂಗ್ರೆಸ್ ಏನಿದ್ರೂ ಮುಸ್ಲಿಮರ ಓಲೈಕೆಗೆ ಅಷ್ಟೇ…!!? ಹೌದಾ..!? ಭಾರತ ಹಿಂದೂ ರಾಷ್ಟ್ರ ಆಗಬೇಕೆಂದರೆ ಬಿಜೆಪಿ ಗೆ ಮತ ಹಾಕಿ, ಕಾಂಗ್ರೆಸ್ ಗೆ ಮತ ಹಾಕಿದರೆ ಭಾರತ ಮುಸ್ಲಿಂ ರಾಷ್ಟ್ರ ಆಗಿಬಿಡುತ್ತದೆ…!! ಈ ರೀತಿ ಭ್ರಮೆ ಹುಟ್ಟಿಸಿದವರು ಯಾರು!?
ಭಾರತ ಪ್ರಪಂಚದಲ್ಲಿ ನ ಏಕೈಕ ಹಿಂದೂ ರಾಷ್ಟ್ರ, ಅದರಲ್ಲಿ ಎರಡು ಮಾತಿಲ್ಲ. ಸ್ವಾತಂತ್ರ್ಯ ನಂತರ, ಇಲ್ಲಿನ ಮುಸ್ಲಿಂ ಸಮುದಾಯದವರು ತಮಗೆ ಪ್ರತ್ಯೇಕ ದೇಶ ಬೇಕು ಎಂದು ಬೇಡಿಕೆ ಇಟ್ಟಾಗ, ಪಾಕಿಸ್ತಾನ ರಚನೆ ಆಯಿತು. ಹಾಗಂದ ಮಾತ್ರಕ್ಕೆ, ಇಲ್ಲಿನ ಮುಸ್ಲಿಮ ರೆಲ್ಲ ಪಾಕಿಸ್ತಾನಕ್ಕೆ ವಲಸೆ ಹೋಗಲಿಲ್ಲ. ಇಲ್ಲಿ ಅಲ್ಪ ಸಂಖ್ಯಾತ ರಾಗಿ ಉಳಿದುಕೊಂಡ ಮುಸ್ಲಿಮರಿಗೆ, ಅಂದಿನ ಸ್ಥಿತಿ ಗತಿಗೆ ಅನುಗುಣವಾಗಿ ವಿಶೇಷ ಮುಸ್ಲಿಂ ಕಾನೂನುಗಳನ್ನು ನೀಡಲಾಯಿತು. ಇದು ಅಂದಿನ ಕಾಲಕ್ಕೆ ಸರಿ ಅನಿಸಿದರೂ, ಕಾಲ ಕ್ರಮೇಣ ಇದನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸಗಳು ಕೂಡ ನಡೆಯಿತು. ಇದು ಬಹುಸಂಖ್ಯಾತ ಹಿಂದೂ ಗಳನ್ನ ಕೆರಳುವಂತೆ ಮಾಡಿದ್ದು ಸುಳ್ಳಲ್ಲ.
ಈ ನಡುವೆ ಮುಸ್ಲಿಂ ಜನಾಂಗಕ್ಕೆ ಬಹುಸಂಖ್ಯಾತ ರಾದ ಹಿಂದೂ ಗಳಿಂದ ದಾಳಿ ಯಾಗಿ ತಮ್ಮ ಅಸ್ತಿತ್ವಕ್ಕೆ ದಕ್ಕೆ ತಂದಾ ರು ಎಂಬ ಭಯ ಕಾಡಲಾರಂಭಿಸಿತು. ಹೀಗಾಗಿ, ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂದೂ ಅನಿಸಿರಬಹುದು. ಈ ವಿಚಾರ ಪಕ್ಷಗಳಿಗೆ ಮತ ಬ್ಯಾಂಕ್ ಆಗಿ ಕಂಡಾಗ, ಪಕ್ಷಾತೀತ ವಾಗಿ ಅಲ್ಪಸಂಖ್ಯಾತ ರ ಓಲೈಕೆ ನಡೆದದ್ದು ಈ ದೇಶ ಕಂಡ ಕಟು ಸತ್ಯ..!! ಇಂದು ಜನಗಣತಿ ನಡೆದರೆ, ಇಲ್ಲಿ ನಿಜವಾದ ಅಲ್ಪಸಂಖ್ಯಾತರು ಯಾರು ಎಂಬುದು ಜಗತ್ತಿಗೆ ತಿಳಿಯಬಹುದು. ಇಂದಿನ ದಿನ ಅಲ್ಪ ಸಂಖ್ಯಾತರ ಮತ ಇಲ್ಲದೆ ಚುನಾವಣೆ ಎದುರಿಸಿ ಯಾವುದೇ ಪಕ್ಷ ಗೆದ್ದು ತೋರಿಸಲಿ..!!
ಈಗ ಈ ವಿಚಾರವನ್ನು, ಮುಸ್ಲಿಮರಿಂದ ಹಿಂದೂಗಳಿಗೆ ಕಂಟಕ ಇದೆ, ಅವರ ಜನಸಂಖ್ಯೆ ಹೆಚ್ಚಾಗಿ ಹಿಂದೂಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಹಿಂದೂಗಳ ತಲೆಗೆ ತುಂಬಿದ್ದೂ ಅದೇ ಮತಿ ಗೆಟ್ಟ ರಾಜಕಾರಣಿಗಳು…!!
ಭಾರತದಲ್ಲಿ ಹಿಂದೂ ಮುಸ್ಲಿಮರು ಬಹಳ ಅನ್ಯೋನ್ಯತೆಯಿಂದ ಇದ್ದ ರು. ಅದರಲ್ಲೂ ರಾಜರುಗಳ ಆಳ್ವಿಕೆಯಲ್ಲಿ ಇಲ್ಲಿ ಮತೀಯ ಕಲಹಗಳೆ ಇರಲಿಲ್ಲ. ಒಡಕು ಮೂಡಿದ್ದೇ ಸ್ವಾತಂತ್ರ್ಯ ನಂತರ, ಅದರಲ್ಲೂ ರಾಜಕಾರಣಿಗಳ ಒಡೆದು ಆಳುವ ನೀತಿ ಯಿಂದಾಗಿ.
ಭಾರತ ಅಂದೂ ಹಿಂದೂ ರಾಷ್ಟ್ರ ಆಗಿತ್ತು, ಇಂದಿಗೂ ಇದೆ, ಮುಂದೆಯೂ ಹಿಂದೂ ರಾಷ್ಟ್ರ ಆಗಿಯೇ ಇರುತ್ತೆ. ಆದರೆ, ಇಲ್ಲಿ ಅಲ್ಪಸಂಖ್ಯಾತರಿಗೆ ಕೂಡ ಜೀವನ ನಡೆಸಲು ಸಂವಿದಾನ, ಈ ನೆಲದ ಕಾನೂನು ಸಮಾನ ಅವಕಾಶ ನೀಡಿದೆ. ನನ್ನ ಉತ್ತರ ಕರ್ನಾಟಕದ ಮುಸ್ಲಿಂ ಗೆಳೆಯನೊಬ್ಬ ಬಸವಣ್ಣ ನ ಅನುಯಾಯಿ, ಹಣೆಯಲ್ಲಿ ವಿಭೂತಿ ಕೂಡ ಧರಿಸುತ್ತಾನೆ. ಭಾರತದ ಕೆಲವೊಂದು ಕಡೆ ಇಂದಿಗೂ ಈ ಸಾಮರಸ್ಯ ಇದೆ.
ಕೆಟ್ಟ ಕ್ರಿಮಿಗಳು ಎಲ್ಲಾ ಧರ್ಮದಲ್ಲೂ ಇದ್ದಾರೆ, ಅವರನ್ನು ಮುಖ ಮೂತಿ ನೋಡದೆ ಕಠಿಣ ಶಿಕ್ಷೆ ನೀಡಬೇಕು. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು, ಆರ್ಥಿಕ ಪರಿಸ್ಥಿತಿ ಆದಾರಿತ ಮೀಸಲಾತಿ ವ್ಯವಸ್ಥೆ ಜಾರಿಯಾಗಬೇಕು.
ಇಲ್ಲಿ ಕೆಲವು ಜನ ತಾವು 2014ರ ನಂತರವೇ ಹುಟ್ಟಿದವರಂತೆ ವರ್ತಿಸುತ್ತಾರೆ. ಬಡತನದ ಕೂಪವಾಗಿದ್ದ ದೇಶವನ್ನು ಕಟ್ಟಿ ಬೆಳೆಸಿದ್ದು ಕಾಂಗ್ರೆಸ್, ನಂತರ ವಿಶ್ವ ಬ್ಯಾಂಕ್ ನಿಂದ ಬೇಕಾಬಿಟ್ಟಿ ಸಾಲ ತಂದು, ಕಾಂಗ್ರೆಸ್ ಹಮ್ಮಿ ಕೊಂಡಿದ್ದ ಹಲವು ಕಾರ್ಯಕ್ರಮ ಗಳನ್ನ ಪೂರ್ಣ ಗೊಳಿಸಿ, ಅದರ ಸಂಪೂರ್ಣ ಕ್ರೆಡಿಟ್ ಪಡಕೊಂಡಿದ್ದು ಮಾತ್ರ ಬಿಜೆಪಿ, ಇದು ನಗ್ನ ಸತ್ಯ ಮತ್ತು ವಾಸ್ತವ. ನನ್ನ ವಿರೋಧ ಈ ವಿಚಾರಕ್ಕೆ ಮಾತ್ರ, ಯಾಕೆಂದರೆ ನನಗೆ ಸುಳ್ಳು ಹೇಳುವವರನ್ನು ಕಂಡರಾಗುವುದಿಲ್ಲ…!! ಈ ದೇಶಕ್ಕೆ ಕಾಂಗ್ರೆಸ್ ನ ಕೊಡುಗೆ ಏನು ಅಂತ ನಿಮ್ಮ ಹಿರಿಯರನ್ನು ಕೇಳಿ, ಕಣ್ಣಿಗೆ ಕಟ್ಟುವಂತೆ ಈ ದೇಶದ ಗತಕಾಲದ ವೈಭವವನ್ನು ಹೇಳುತ್ತಾರೆ.
ಯಾವ ಪಕ್ಷದಿಂದಲೂ ಹಿಂದೂ ಧರ್ಮವನ್ನು ಅಳಿಸಲೂ ಸಾಧ್ಯವಿಲ್ಲ, ಉಳಿಸಲೂ ಸಾಧ್ಯವಿಲ್ಲ. ನಾವು ಧರ್ಮ ವಂತರಾಗಿ ಬೆಳೆಸ ಬೇಕಷ್ಟೇ. ಅಧರ್ಮವನ್ನೂ ಮೆಟ್ಟಿ ನಿಂತು ಸಾವಿರಾರು ವರ್ಷಗಳ ಇತಿಹಾಸ ಇರುವ ಭರತ ಖಂಡ ವಿದು, ಯಾರು ಬರಲಿ ಹೋಗಲಿ, ಇದೂ ಎಂದಿಗೂ ವಿಶ್ವಕ್ಕೆ ಶಾಂತಿ, ಪ್ರೀತಿ, ಸಹಬಾಳ್ವೆಯ ಪ್ರತೀಕವಾಗಿ ಬೆಳೆಯುತ್ತಾ ಇರುತ್ತದೆ..
ಬರಹ: ಶರತ್ ಅಂಬೆಕಲ್ಲು; (ಕೃಪೆ ಪೇಸ್ಬುಕ್)