Ad Widget .

ಬೆಳ್ಳಾರೆ: ಸಿಕ್ಕಿದ್ದು ದಕ್ಕದು ಎಂದು ‘ಕಾಮಧೇನು’ವಿನ ಮೇಲೆ ಮೋಸದ ಬಲೆ ಎಸೆದ ದಿವ್ಯಪ್ರಭಾ!? ಪುತ್ತೂರು ಜೆಡಿಎಸ್ ಅಭ್ಯರ್ಥಿ ಮೇಲೆ ಮೋಸ; ವಂಚನೆ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಬೀದಿಗೆ ಬಂದಿದ್ದ ಕಾಮಧೇನು ಮಾಧವ ಗೌಡರ ಮನೆಯ ಕಲಹವು ಇದೀಗ ಮತ್ತೊಂದು ರೀತಿಯಲ್ಲಿ ಬೀದಿಗೆ ಬಂದಿದದ್ದು ಸ್ವಂತ ಪತ್ನಿಯೇ ತನ್ನ ಗಂಡ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ(45) ಮಾಧವ ಗೌಡ(65), ಸ್ಪಂದನ(23), ಪ್ರಕರಣದ ಆರೋಪಿಗಳು. ದೂರು ನೀಡಿರುವ ನವೀನ್ ಎಂಬವರ ಚಿಕ್ಕಮ್ಮ(ಮಾಧವ ಗೌಡರ ಎರಡನೇ ಪತ್ನಿ) ತಾರಾಕುಮಾರಿ, ತಾ.31-12-2020 ರಂದು ತಾರ ಕುಮಾರಿಯವರು ತನ್ನ ಒಡೆತನದಲ್ಲಿ ಕಾಮಧೇನು ಗೋಲ್ಡ್ ಪ್ಯಾಲೇಸ್‌ನ್ನು ನವೀನ್ ಗೌಡ ಹಾಗೂ ಸ್ಪಂದನರವರ ಮಾರಾಟ ಮಾಡಿರುತ್ತಾರೆ. ಈ ವೇಳೆ ಮಾಡಿಕೊಂಡ ಕರಾರಿನ ಪ್ರಕಾರ 10,000 ರೂ. ಮುಂಖಡ ಪಾವತಿಸಿ ಮಿಕ್ಕಿದ ಪ್ರತಿಫಲವನ್ನು ನವೀನ್ ಗೌಡ ಮತ್ತು ಸ್ಪಂದನರು ತಾರ ಕುಮಾರಿಯವರಿಗೆ ಚಿನ್ನ ಮತ್ತು ಬೆಳ್ಳಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಹಣವನ್ನು 24 ತಿಂಗಳ ಒಳಗೆ ಪಾವತಿಸಬೇಕಾಗಿತ್ತು. ತಪ್ಪಿದಲ್ಲಿ ಅಲ್ಲಿರುವ 6034.01ಗ್ರಾಂ ಚಿನ್ನ, 50,161.09 ಬೆಳ್ಳಿ, ಮತ್ತು ಸಂಸ್ಥೆಯ ಪೀಠೋಪಕರಣಗಳನ್ನು ಒಳಗೊಂಡು ನನ್ನ ಸಂಪೂರ್ಣ ಸ್ವಾಧೀನಕ್ಕೆ ಹಿಂತಿರುಗಿಸಬೇಕಿತ್ತು.

Ad Widget . Ad Widget . Ad Widget .

ಆದರೆ ನವೀನ್ ಮತ್ತು ಸ್ಪಂದನನ ನಡುವೆ ವೈವಾಹಿಕ ಕಲಹ ಉಂಟಾಗಿ ಕಾಮಧೇನು ಗೋಲ್ಡ್ ಪ್ಯಾಲೇಸ್‌ನ್ನು ಹಲವು ಸಮಯದಿಂದ ಬಂದ್ ಮಾಡಲಾಗಿತ್ತು. ಇದನ್ನು ಉಪೋಗಿಸಿಕೊಂಡು ಸ್ಪಂದನ ಸೇರಿದಂತೆ ಮೂವರು ಆರೋಪಿಗಳು ಮತ್ತು ಕೆಲ ಗೂಂಡಗಳನ್ನು ಕರೆದುಕೊಂಡು ಬಂದು ಬಲಾತ್ಕಾರವಾಗಿ ಗೋಲ್ಡ್ ಪ್ಯಾಲೇಸ್ ನವೀನ ಎಂ ಹಾಕಿರುವ ಬೀಗವನ್ನು ಬಲಾತ್ಕಾರವಾಗಿ ಒಡೆದಿದ್ದಾರೆ. ಬಳಿಕ ಬಳಿ ಸಿ.ಸಿ ಕ್ಯಾಮೆರಾ ಬಂದು ಮಾಡಿ, ಅದರಲ್ಲಿರುವ ಚಿನ್ನಾಭರಣ ದರೋಡೆ ಮಾಡಿದಲ್ಲದೆ. ಫೈನಾನ್ಸ್ ಗೆ ಸಂಬಂಧಪಟ್ಟ ಎಲ್ಲ ದಾಖಲೆಗಳ ಫೈಲುಗಳನ್ನು, ಮೂಲ ಕರಾರು ಪತ್ರಗಳನ್ನು ಕೂಡ ದರೋಡೆ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೆ ಮಳಿಗೆಯಲ್ಲಿದ್ದ ಸಿ.ಸಿ ಕ್ಯಾಮೆರದ ಡಿವಿಆರ್ ಕೂಡ ಕಳವು ಮಾಡಿದ್ದಾರೆ.

ಹಾಗಾಗಿ ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಈ ಮೂವರು ಆರೋಪಿಗಳು ಮಾಡಿರುವ ದರೋಡೆ ನನಗೆ ಮೋಸ ಮಾಡುವ ಉದ್ದೇಶದಿಂದ ಮಾಡಿರುದಾಗಿದೆ. ಈ ಕಾರಣ ತಾರಾಕುಮಾರಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 22/2023 ಯಂತೆ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಮಾಧ್ಯಮ ಜೊತೆ ಮಾತನಾಡಿದ ತಾರ ಕುಮಾರಿಯವರು, ನಾನು ಮಾಧವ ಗೌಡರ ಎರಡನೇ ಹೆಂಡತಿಯಾಗಿದ್ದು, ಅವರ ಜೊತೆ ಸಂಸಾರ ಮಾಡುತ್ತಿದ್ದೆ. ಅದೇ ರೀತಿ ನನಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಇನ್ನೂ ನಾನು ಸುಮಾರು 1998ರಿಂದ ಕಾಮಧೇನು ಗೋಲ್ಡ್ ಪ್ಯಾಲೇಸ್ ನ ಮಾಲಕತ್ವ ಹೊಂದಿದ್ದು 2020 ರ ತನಕ ವ್ಯವಹಾರ ಮಾಡಿಕೊಂಡು ಬಂದಿದ್ದೆ. ನನ್ನ ಒಡೆತನದಲ್ಲಿದ್ದ ಕಾಮಧೇನು ಗೋಲ್ಡ್ ಪ್ಯಾಲೇಸ್ ನ್ನು ನವೀನ್ ಮತ್ತು ಸ್ಪಂದನ ನ ಹೆಸರಿಗೆ ಕರಾರಿನ ಮುಖಾಂತರ ಮಾಡಿಸಿಕೊಂಡಿರುತ್ತಾರೆ. ಬಳಿಕ ನನ್ನ ಗಂಡ ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಾಪ್ರಭಾರ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಇದನ್ನು ಕಾರಣವಾಗಿಟ್ಟು ಮಾಧವ ಗೌಡ ಮತ್ತು ದಿವ್ಯಾಪ್ರಭರ ಸಂಬಂಧ ಮುಂದುವರೆಸುವ ನನ್ನನ್ನು ಮನೆಯಿಂದ ದೂರ ಮಾಡಿರುತ್ತಾರೆ. ಒಟ್ಟಿನಲ್ಲಿ ದಿವ್ಯಾಪ್ರಭಾ ನನ್ನ ಗಂಡನ ಜೊತೆ ಸಂಬಂಧ ಬೆಳೆಸಿದ ಬಳಿಕ ನಮ್ಮ ಮನೆಯ ಸಂಸಾರ ಹಾಲಾಗಿ ಹೋಗಿದೆ. ಈ ಕಾರಣ ಮೇಲೆ ಆಗಿರುವ ಘಟನೆ ನಡೆಯಲು ಕಾರಣ ಎಂದು ನಾನು ಈ ಮೂಲಕ ಹೇಳಿಕೊಳ್ಳುತ್ತಿದ್ದೇನೆ.

Leave a Comment

Your email address will not be published. Required fields are marked *