ಸಮಗ್ರ ನ್ಯೂಸ್: ಪ್ರಸಿದ್ಧ ಧರ್ಮಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು (ಮೇ3) ನಡೆಯಲಿದ್ದು , 201 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ವಿವಾಹ ಸಮಾರಂಭ ಅವರವರ ಜಾತಿ ಸಂಪ್ರದಾಯದಂತೆ ಮೇ 3ರ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನದಲ್ಲಿ 201 ಜೋಡಿಗಳು ಸಾಮೂಹಿಕ ವಿವಾಹ ನಡೆಯಲಿದೆ.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಪತ್ನಿ ಹೇಮಾವತಿ ಹೆಗ್ಗಡೆ ಅವರು ಜೋಡಿಗಳಿಗೆ ಮಂಗಳಸೂತ್ರ ವಿತರಣೆ ಮಾಡುತ್ತಾರೆ. ಕಾರ್ಯಕ್ರಮದ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಭರಿಸುತ್ತದೆ. ಈ ಯೋಜನೆಯಡಿ 12,576 ಜೋಡಿಗಳು ಸಾಮಾಹಿಕ ವಿವಾಹವನ್ನು ಮಾಡಿಕೊಂಡಿದ್ದಾರೆಂದು ವರದಿಯಾಗಿದೆ, ಅಲ್ಲದೇ ಈ ಇಲ್ಲಿ ವಿವಾಹ ಮಾಡಿಕೊಳ್ಳೋ ಜೋಡಿಗಳಿಗೆ ವಧುವಿಗೆ ಸೀರೆ, ಕುಪ್ಪಸ ಹಾಗೂ ಮಂಗಳಸೂತ್ರ ನೀಡಲಾಗುತ್ತದೆ.