ಸಮಗ್ರ ನ್ಯೂಸ್: ಬರೋಬ್ಬರಿ ಒಂಭತ್ತು ಸರ್ಕಾರಿ ಶಾಲೆಯಿಂದ ಕಳ್ಳತನ ಮಾಡಿದ ಖತರ್ ನಾಕ್ ಕಳ್ಳರ ಗ್ಯಾಂಗನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ದೋಲ ಮನೆ ಹೊನ್ನಪ್ಪ ಗೌಡರ ರಕ್ಷಿತ್ ಡಿ (24 ವರ್ಷ) ,ಮೀನಾಡಿಯ ಧರ್ಣಪ್ಪ ಗೌಡರ ಪುತ್ರ ತೀರ್ಥೇಶ್ಎಂ.( 29 ವರ್ಷ) ಉರುಂಬಿ ಮನೆಯ ಕುಶಾಲಪ್ಪ ಗೌಡರ ಪುತ್ರ ಯಜ್ಞೇಶ್ ಯು.ಕೆ (30 ವರ್ಷ) ,ಹಳ್ಳಿಮನೆಯ ವಿಶ್ವನಾಥ ಶೆಟ್ಟಿ ಎಂಬವರ ಮಗ ರೋಹಿತ್ ಹೆಚ್. ಶೆಟ್ಟಿ,( 23 ವರ್ಷ) ಆರೋಪಿಗಳು.
ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ನುಗ್ಗಿ ಸುಮಾರು 32,0000/- ಮಾಲ್ಯದ 8 ನಿರುಪಯುಕ್ತ ಬ್ಯಾಟರಿಗಳನ್ನು ಕಳ್ಳರು ಕಳವುಮಾಡಿಕೊಂಡು ಹೋಗಿರುವ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಕೇರಿ ಪ್ರಭಾಕರ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ
ಆರೋಪಿಗಳು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಸರಕಾರಿ ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಒಂದು ಸರಕಾರಿ ಶಾಲೆಯಿಂದ, ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಸರಕಾರಿ ಶಾಲೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಸರಕಾರಿ ಶಾಲೆಯಿಂದ ಒಟ್ಟು ದ.ಕ ಜಿಲ್ಲೆಯ 9 ಸರಕಾರಿ ಪ್ರೌಢ ಶಾಲೆಗಳಿಂದ ಕಳವುಮಾಡಿದ ಸುಮಾರು 2.00,000/- ರೂ ಮೌಲ್ಯದ ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃತ್ಯಕ್ಕೆ ಉಪಯೋಗಿಸಿದ ಸುಮಾರು 1,00,000/- ಮೌಲ್ಯದ ಕೆಎ-19-ಪಿ-2483 ನೇ ನೋಂದಣಿ ಸಂಖ್ಯೆಯ ಮಾರುತಿ ಆಲ್ಟೋ ಕಾರು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 2 ½ ಅಡಿ ಉದ್ದದ ಕಬ್ಬಿಣದ ಲಿವರ್ ಒಂದು, ಕೆಂಪು ಬಣ್ಣದ ಪ್ಲಾಸ್ಟಿಕ್ ಕವರ್ ಇರುವ ಕಟಿಂಗ್ಪ್ಲೇಯರ್ ಒಂದು, ಮಾಸಲು ಹಳದಿ ಬಣ್ಣದ ಹಿಡಿ ಇರುವ ಸುಮಾರು 11 ಇಂಚು ಉದ್ದದ ಹಳೆಯ ಸ್ಕ್ರೂಡೈವರ್ –ಒಂದು, ನೀಲಿ ಬಣ್ಣದ ಆ್ಯಕ್ಸೋ ಬ್ಲೇಡ್ ಗಳು -02, ಕಪ್ಪು ಬಣ್ಣದ ಗಮ್ ಟೇಫ್ ಹಾಕಿದ ಚಿಕ್ಕ ಟಾರ್ಚ್ಲೈಟ್ –ಒಂದು, ಕಪ್ಪು ಬಣ್ಣದಲ್ಲಿ ಕೆಂಪನಿಯ ಡಿಸೈನ್ ಇರುವ ಟೋಪಿ –ಒಂದು ಇವುಗಳನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಸೊತ್ತುಗಳು ಒಟ್ಟು ಅಂದಾಜು ಮೌಲ್ಯ 3,00000/- ಆಗಬಹುದೆಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು)ಅನೀಲಕುಮಾರ ಡಿ, ಪಿ.ಎಸ್.ಐ (ತನಿಖೆ) ಶ್ರೀಮತಿ ರೇಣುಕ ರವರನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.