Ad Widget .

ಸುಳ್ಯ ಕಾಂಗ್ರೆಸ್ ನ ಆಂತರಿಕ ಗೊಂದಲಕ್ಕೆ ಎಳ್ಳುನೀರು| ಬಗೆಹರಿದ ಅಸಮಾಧಾನ; ಒಗ್ಗಟ್ಟಿನ ಮಂತ್ರ ಜಪಿಸಿದ ಕೈ ಪಾಳಯ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತು ನಂತರದ ಪಕ್ಷದೊಳಗಿನ ಗೊಂದಲಗಳ ಬಗ್ಗೆ ಕೆಪಿಸಿಸಿ ಮತ್ತು ಎ ಐ ಸಿ ಸಿ ನಿರ್ದೇಶನದಂತೆ ಮಾಜಿ ಸಚಿವ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಎ ಐ ಸಿ ಸಿ ಸದಸ್ಯ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ಕೇದಾರ್ ಉಪಸ್ಥಿತಿಯಲ್ಲಿ ಬಂಟ್ವಾಳ ದಲ್ಲಿ ರಮಾನಾಥ ರೈ ಯವರ ನಿವಾಸದಲ್ಲಿ ಸಭೆ ನಡೆಸಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸುಳ್ಯ ಮತ್ತು ಕಡಬ ಬ್ಲಾಕ್ ಅಧ್ಯಕ್ಷರು ಅಭ್ಯರ್ಥಿ ಕೃಷ್ಣಪ್ಪ ಮತ್ತು ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಹೆಚ್ ಎಂ ನಂದಕುಮಾರ್ ಹಾಗೂ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ಬಳಗದ ಪ್ರಮುಖರ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಈ ಮೂಲಕ ಪಕ್ಷದ ಆಂತರಿಕ ಗೊಂದಲಗಳನ್ನು ಮತ್ತು ಕಾರ್ಯಕರ್ತರ ಬಗ್ಗೆ ಕೇವಲವಾಗಿ ಮಾತನಾಡಿದ ವಿಚಾರವನ್ನು ಬದಿಗಿರಿಸಿ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಜತೆಯಾಗಿ ಕಾರ್ಯನಿರ್ವಹಿಸಲು ಕೈ ಪಾಳಯ ತೀರ್ಮಾನಿಸಿದೆ.

Ad Widget . Ad Widget . Ad Widget .

ಈ ಬಗ್ಗೆ ಇದ್ದ ಗೊಂದಲ ನಿವಾರಣೆ ಬಗ್ಗೆ ಸುಳ್ಯ ಮತ್ತು ಕಡಬ ಬ್ಲಾಕ್ ಜಂಟಿ ಪತ್ರಿಕಾಗೋಷ್ಠಿ ನಡೆಸುವಂತೆ ಮಾಜಿ ಸಚಿವ ರಮಾನಾಥ ರೈ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ಬ್ಲಾಕ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಪ್ರವೀಣ್ ಕುಮಾರ್ ಕೇಡೆಂಜಿಗುತ್ತು, ಮಹೇಶ್ ಭಟ್ ಕರಿಕ್ಕಳ, ಗೋಕುಲ್ ದಾಸ್ ಸುಳ್ಯ, ಸತ್ಯಕುಮಾರ್ ಅಡಿಂಜ, ಉಷಾ ಅಂಚನ್, ಉಷಾ ಜೋಯ್,ಶಶಿಧರ್ ಎಂ ಜೆ ಭವಾನಿಶಂಕರ್ ಕಲ್ಮಡ್ಕ, ಸುಧೀರ್ ದೇವಾಡಿಗ, ಸತೀಶ್ ಶೆಟ್ಟಿ, ರವೀಂದ್ರ ರುದ್ರಪಾದ, ಪೈಜಲ್ ಕಡಬ, ಬಾಲಕೃಷ್ಣ ಮರೀಲ್, ಶೋಭಿತ್ ನಾಯರ್, ಶಿವರಾಮ ರೈ ಸುಬ್ರಮಣ್ಯ, ಗೋಪಾಲಕೃಷ್ಣ ಭಟ್, ಕಮಲಾಕ್ಷ ಕೊಲ್ಲಮೊಗ್ರು, ಅಬೂಬಕ್ಕರ್ ಅರಫಾ, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *