ಬೆಂಗಳೂರು : ಕನ್ನಡ ಚಿತ್ರರಂಗದ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹತ್ಯೆಗೆ ಸ್ಕೇಚ್ ಹಾಕಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ರಾಜೀವ್ ಅಲಿಯಾಸ್ ಕರಿಯ ರಾಜೇಶ್‌ಎಂದು ಗುರುತಿಸಲಾಗಿದೆ. ಈತ ಬಾಂಬೆ ರವಿ ತಂಡಕ್ಕೆ ಸೇರಿದವನಾಗಿದ್ದ ಈತ ನೇಪಾಳದಲ್ಲಿ ತಲೆ ಮರೆಸಿಕೊಂಡಿದ್ದ. ಆದರೆ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಳೆದ ವರ್ಷ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ಅವರ ಸಹೋದರ ದೀಪಕ್ ಅವರ ಹತ್ಯೆಗೆ ಸಂಚುರೂಪಿಸಲಾಗಿತ್ತು. ಅಲ್ಲದೆ, ಕೊಲೆ ಬೆದರಿಕೆ ಹಾಕಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ದರೋಡೆ ಮುಂತಾದ ಭೂಗತ ಚಟುವಟಿಕೆಗಳನ್ನು ನಡೆಸಲು ಬಾಂಬೆ ರವಿ ಮತ್ತು ಆತನ ಸಹಚರರು ಪ್ಲ್ಯಾನ್ ರೂಪಿಸಿದ್ದರು. ಬೆಂಗಳೂರಿನಿAದ ಹೊರಗೆ ಇದ್ದುಕೊಂಡು, ನಗರದಲ್ಲಿನ ಹಣವಂತರಿಗೆ ಧಮ್ಕಿ ಹಾಕುತಿದ್ದ ಈ ಗ್ಯಾಂಗ್‌ನ ಹಲವರನ್ನು ಈ ಮೊದಲೇ ವಶಕ್ಕೆ ಪಡೆಯಲಾಗಿತ್ತು.
ಘಟನೆ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಹನ್ನೊಂದು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ತಿಂಗಳಿಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿದ್ದ ದಕ್ಷಿಣ ವಿಭಾಗದ ಪೊಲೀಸರು ಈಗ ರಾಜೇಶ್ ಅಲಿಯಾಸ್ ಕರಿಯ ರಾಜೇಶ್‌ನ್ನು ಬಂಧಿಸಿದ್ದಾರೆ. ಈ ಹಿಂದೆ ಕೊಲೆಯಾದ ಹಳೆ ರೌಡಿ ಪರಂದಾಮಯ್ಯನ ಜೊತೆ ಇರುತ್ತಿದ್ದ ಕರಿಯ ರಾಜೇಶ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.