ಸಮಗ್ರ ನ್ಯೂಸ್: ಕೊರಟಗೆರೆಯ ಭೈರೇನಹಳ್ಳಿಯಲ್ಲಿ ಇಂದು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ತಲೆಗೆ ಕಲ್ಲು ಬಿದ್ದು ಗಾಯಗೊಂಡಿದ್ದರು.
ಇದು ಜಿಲ್ಲಾಡಳಿತದ ವೈಫಲ್ಯವಾಗಿದೆ. ಚುನಾವಣಾ ಆಯೋಗವು ಕಳಂಕಿತ ಅಧಿಕಾರಿಯನ್ನು ವರ್ಗಾಯಿಸುವಂತೆ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಇಂದು ಟ್ವಿಟ್ ಮಾಡಿರುವಂತ ಅವರು, ಡಾ.ಜಿ.ಪರಮೇಶ್ವರ ಮೇಲೆ ಕಲ್ಲು ತೂರಿ ಗಾಯಮಾಡಿರುವುದು ಹತಾಷೆ ಷಡ್ಯಂತ್ರ. ನಾಮಪತ್ರ ಸಲ್ಲಿಕೆ ವೇಳೆ ಕಲ್ಲು ತೂರಿದ್ದು ಮಹಿಳಾ ಪೇದೆ ಗಾಯಗೊಂಡರು. ಇಂದು ಪರಮೇಶ್ವರ್ ಅವರೇ ಹಲ್ಲೆಗೆ ಒಳಗಾಗಿದ್ದಾರೆ. ಇದು ಜಿಲ್ಲಾಆಡಳಿತದ ವೈಫಲ್ಯ. ಷಡ್ಯಂತ್ರಕ್ಕೆ ಅವಕಾಶ ನೀಡಿದೆ ಚುನಾವಣಾ ಆಯೋಗ ರಕ್ಷಣೆ ನೀಡಲಿ. ಕಳಂಕಿತ ಅಧಿಕಾರಿಗಳ ವರ್ಗಾಯಿಸಲಿ ಎಂದು ಆಗ್ರಹಿಸಿದ್ದಾರೆ.