ಸಮಗ್ರ ನ್ಯೂಸ್: ಮುಂದಿನ ತಿಂಗಳ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆಗೆ ನಾಳೆಯಿಂದ ಬ್ಯಾಲೇಟ್ ಪೇಪರ್ ವೋಟಿಂಗ್ ಶುರುವಾಗುತ್ತಿದೆ. 80 ವರ್ಷ ಮೇಲ್ಪಟ್ಟ ವೃದ್ದರು ಹಾಗೂ ವಿಕಲಚೇತನರು ಮನೆಯಿಂದ, ಪೊಲೀಸರು, ಚುನಾವಣಾ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಬ್ಯಾಲೇಟ್ ಪೇಪರ್ ಮೂಲಕ ತಮ್ಮ ಹಕ್ಕು ಚಲಾಯಿಸಬಹುದಾಗಿದೆ.
80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ವೋಟಿಂಗ್ ವ್ಯವಸ್ಥೆ ಮಾಡಲಾಗಿದ್ದರೆ, ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಪತ್ರಕರ್ತರು ಅವರವರ ಕ್ಷೇತ್ರಗಳಲ್ಲಿ ನಾಳೆಯಿಂದ ಬ್ಯಾಲೇಟ್ ವೋಟಿಂಗ್ ಮಾಡಬಹುದಾಗಿದೆ.
ಚುನಾವಣಾ ಅಯೋಗದ ಸಿಬ್ಬಂದಿಗಳಿಂದ 80 ವರ್ಷ ಮೇಲ್ಪಟ್ಟ ವೃದ್ಧರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಗೌಪ್ಯ ಮತ ಚಾಲಯಿಸುವಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ.
ಮನೆಯಲ್ಲಿ ಮತದಾನ ಮಾಡುವ ವೃದ್ಧರ, ಅಂಗವಿಕಲರ ಪ್ರಕ್ರಿಯೆಯನ್ನು ವಿಡಿಯೋ ಮಾಡಿಕೊಳ್ಳಲಾಗುತ್ತದೆ. ಎಲ್ಲಾ ಅಂಚೆ ಮತಗಳನ್ನು ಮತಪೆಟ್ಟಿಗೆಯಲ್ಲಿ ಇರಿಸಿ ಸ್ಟ್ರಾಂಗ್ ರೂಂ ಗೆ ರವಾನಿಸಲಾಗುತ್ತದೆ. ಮೇ.13ರಂದು ಈ ಮತಗಳನ್ನು ಮೊದಲು ಎಣಿಕೆ ಮಾಡಲಾಗುತ್ತದೆ.