ಸಮಗ್ರ ನ್ಯೂಸ್: ಸುಳ್ಯ ನಗರದಿಂದ ಸಂಪಾಜೆ ವರೆಗೆ ಪಯಸ್ವಿನಿ ನದಿಗೆ ಕೃಷಿ ಪಂಪ್ ಗಳನ್ನು ಅಳವಡಿಸಿದ ಕೃಷಿಕರಿಗೆ ಸುಳ್ಯ ತಹಶೀಲ್ದಾರ್ ಮಹತ್ವದ ಸೂಚನೆ ನೀಡಿದ್ದಾರೆ.
ಸುಳ್ಯ ನಗರಕ್ಕೆ ನೀರಿನ ಸಮಸ್ಯೆ ಎದುರಾಗಿರುವುದರಿಂದ, ಸುಳ್ಯ ನಗರದಿಂದ ಸಂಪಾಜೆ ವರೆಗೆ ಪಯಸ್ವಿನಿ ನದಿಗೆ ಕೃಷಿ ಪಂಪ್ ಗಳನ್ನು ಅಳವಡಿಸಿದ ಕೃಷಿಕರು ತಮ್ಮ ಕೃಷಿ ಉಪಯೋಗಕ್ಕಾಗಿ ಎರಡು ದಿನಗಳಿಗೊಮ್ಮೆ ಮಾತ್ರ ಬಳಸಿಕೊಳ್ಳುವಂತೆ ಸುಳ್ಯ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ನಗರಕ್ಕೆ ಕುಡಿಯುವ ನಿರೀನ ಮೂಲಧಾರವಾಗಿರುವ ಪಯಸ್ವಿನಿ ನದಿಯ ನೀರಿನ ಹರಿವು ನಿಂತು ಹೋಗಿದ್ದು, ಸುಳ್ಯದಿಂದ ಸಂಪಾಜೆವರೆಗಿನ ಪಯಸ್ವಿನಿ ನದಿಗೆ ಅಳವಡಿಸಿರುವ ಪಂಪ್ ಸೆಟ್ ನ ಮೇಲ್ಭಾಗದ ಕೃಷಿಕರು ನದಿಯಲ್ಲಿ ಹೊಂಡಗಳನ್ನು ತೋಡಿ ನೀರನ್ನು ಕೃಷಿಗೆ ಉಪಯೋಗ ಮಾಡುತ್ತಿರುವುದರಿಂದ ನೀರಿನ ಹರಿವು ನಿಂತು ಹೋಗಿರುತ್ತದೆ.
ಇದರಿಂದಾಗಿ ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯು ಕಂಡು ಬಂದಿರುವುದರಿಂದ ನಗರ ನಿವಾಸಿಗಳಿಗೆ ಕುಡಿಯುವ ನೀರಿನ ಪೊರೈಕೆಗಾಗಿ ಪೂರಕ ಕ್ರಮಕ್ಕಾಗಿ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಗಳು ಸುಳ್ಯ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.