ಸಮಗ್ರ ನ್ಯೂಸ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ದೇವರ ಬಲಿ ಉತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರುವಾರ ರಾತ್ರಿ ಶ್ರೀ ದೇವಿಯ ಶಯನೋತ್ಸವ ನಡೆದಿದ್ದು, ಭಕ್ತರಿಂದ ದೇವರಿಗೆ ಸುಮಾರು 10 ಸಾವಿರ ಅಟ್ಟಿ ಮಲ್ಲಿಗೆ ಹೂವು ಸಮರ್ಪಣೆಯಾಯಿತು.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಧ್ಯಾಹ್ನದಿಂದಲೇ ಸಾವಿರಾರು ಮಂದಿ ಮಲ್ಲಿಗೆ ಸಮರ್ಪಣೆ ಮಾಡಿದರು. ಎ. 21ರಂದು ಪ್ರಾತಃ ಕವಾಟೋದ್ಘಾಟನೆ, ವಸಂತ ಮಂಟಪದಲ್ಲಿ ಶಯನ – ಪುಷ್ಪ ವಿತರಣೆ, ಪ್ರಸಾದ ವಿತರಣೆ, ಅಭಿಷೇಕ ಸೇವೆಗಳು ಮಹಾಪೂಜೆ ನೆರವೇರಲಿದೆ.
ಸಂಜೆ ಯಾತ್ರೆ ಬಲಿ ಹೊರಟು ವಸಂತ ಪೂಜೆ, ಓಕುಳಿ ಪೂಜೆ, ಚಿನ್ನದ ಪಲ್ಲಕ್ಕಿಯಲ್ಲಿ ಎಕ್ಕಾರು ಸವಾರಿ, ಕಟ್ಟೆ ಪೂಜೆ, ರಾತ್ರಿ ರಥ ಬಲಿ, ರಥಾರೋಹಣ ನಡೆಯಲಿದೆ. ಗುರುವಾರ ಸಂಭ್ರಮದ ಹಗಲು ಬ್ರಹ್ಮರಥೋತ್ಸವ ಜರಗಿತು.