ಸಮಗ್ರ ನ್ಯೂಸ್: ಕಾಗವಾಡ ತಾಲೂಕಾ ಪಟ್ಟಣದಲ್ಲಿರುವ ಚುಣಾವಣಾ ಅಧಿಕಾರಿಯ ಕಚೇರಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀಮಂತ ಪಾಟೀಲ ಅವರು ಬೃಹತ್ ಬೈಕ್ ರ‍್ಯಾಲಿ ಮಾಡುವ ಮೂಲಕ ಎ.19ರಂದು ನಾಮಪತ್ರವನ್ನು ಸಲ್ಲಿಕೆ ಮಾಡಿದರು
ನಂತರ ಶಾಂತಿಸಾಗರ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇವತ್ತಿನ ನನಗೆ ತುಂಬಾ ಖುಷಿ ತಂದ ದಿನವಾಗಿದ್ದು ನನ್ನ ಮತಕ್ಷೇತ್ರದಲ್ಲಿ ಈಗಾಗಲೇ 70 ರಷ್ಟು ಕೆಲಸ ಮಾಡಿದ್ದೇನೆ ಮುಂದಿನ ಸಲ ನಿವು ನನಗೆ ಮತ್ತೋಮ್ಮೆ ಆಶಿರ್ವಾದ ಮಾಡಿ ಎಂದು ಮತದಾರರಲ್ಲಿ ಮತಯಾಚನೆ ಮಾಡಿದರು
ನಂತರ ರಮೇಶ್ ಜಾರಕಿಹೊಳಿ ಅವರು ಮಾತನಾಡಿ ಮತ್ತೋಮ್ಮೆ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ಮಾಡಿ ಶ್ರೀಮಂತ ಪಾಟೀಲ ಅವರನ್ನು ಜಯಶಾಲಿ ಮಾಡಿ ಎಂದು ಶ್ರಿಮಂತ ಪಾಟೀಲ ಪರ ಮತಯಾಚನೆ ರಮೇಶ ಜಾರಕಿಹೊಳಿ ಅವರು ಮಾಡಿದರು. ಕೆಲವೊಂದಿಷ್ಟು ಜನ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಆದ ಕಾರಣ ನಾನು ಮೇ 13 ರಂದು ಮಾತನಾಡುತ್ತನೆ ಎಂದು ಹೇಳಿದರು