Ad Widget .

ಅಮುಲ್ ಬಳಿಕ ಮೆಣಸಿನಕಾಯಿ ಮಸಾಲೆ ಅರೆಯುತ್ತಿರುವ ಗುಜರಾತ್| ಬ್ಯಾಡಗಿ ಮೆಣಸಿನ ಮಾರುಕಟ್ಟೆ ಆವರಿಸಿಕೊಳ್ಳುತ್ತಿದೆ ‘ಲಾಲ್ ಮಿರ್ಚಿ’

ಸಮಗ್ರ ನ್ಯೂಸ್: ಅಮುಲ್ ಹಾಲಿನ ವಿವಾದದ ಬಳಿಕ ಈಗ ಗುಜರಾತ್ ಮೆಣಸು ಮಾರುಕಟ್ಟೆಯಲ್ಲಿ ಗದ್ದಲ ಸೃಷ್ಟಿಸಿದೆ. ಬೆಂಗಳೂರು ಮಾರುಕಟ್ಟೆಗೆ ಅಮುಲ್ ಪ್ರವೇಶದ ಪ್ರಸ್ತಾವನೆ ಸಿಕ್ಕಾಪಟ್ಟೆ ರಾಜಕೀಯ ಗದ್ದಲ ಸೃಷ್ಟಿಸಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚುತ್ತಿರುವ ಸಮಯದಲ್ಲಿ ಗುಜರಾತ್ ಮೂಲದ ಅಮುಲ್ ಸಂಸ್ಥೆ ಬೆಂಗಳೂರು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ಬಾಯ್ಕಾಟ್‌ ಅಮುಲ್‌, ಸೇವ್‌ ನಂದಿನಿ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಭಿಯಾನ ಪ್ರಾರಂಭಿಸಿದ್ದರು. ಈಗ ಗುಜರಾತಿ ಮೆಣಸಿನ ತಳಿ ‘ಪುಷ್ಪ’ ರಾಜ್ಯದ ಬ್ಯಾಡಗಿ ಮೆಣಸಿನ ತಳಿಗೆ ಪೈಪೋಟಿ ನೀಡಲು ಮುಂದಾಗಿದೆ. ‘ಲಾಲಿ’ ಎಂಬ ಹೆಸರಿನಿಂದ ಕೂಡ ಕರೆಯಲ್ಪಡುವ ‘ಪುಷ್ಪ’ ಏಷ್ಯಾದಲ್ಲಿ ಅತೀದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬ್ಯಾಡಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೂಲಗಳ ಪ್ರಕಾರ ಕನಿಷ್ಠ 20 ಸಾವಿರ ಕ್ವಿಂಟಾಲ್ ಗುಜರಾತಿ ಮೆಣಸು ಇತ್ತೀಚಿನ ಕೆಲವು ತಿಂಗಳಲ್ಲಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಪುಷ್ಪ ಸ್ಥಳೀಯ ಬ್ಯಾಡಗಿ ಮೆಣಸಿನ ತಳಿಗಳಾದ ಡಬ್ಬಿ ಹಾಗೂ ಕಡ್ಡಿಗೆ ಪ್ರತಿಸ್ಪರ್ಧಿ ಅಲ್ಲದಿದ್ದರೂ ಈ ಗುಜರಾತಿ ಮೆಣಸಿನ ತಳಿ ಬೃಹತ್ ಪ್ರಮಾಣದಲ್ಲಿ ಸ್ಥಳೀಯ ಮಾರುಕಟ್ಟೆಯನ್ನು ತಲುಪಿದೆ. ಇನ್ನು ಪುಷ್ಪ ಮೆಣಸು ಸ್ಥಳೀಯ ತಳಿಗಳಿಗಿಂತ ಗಾಢ ಕೆಂಪು ವರ್ಣ ಹೊಂದಿದೆ. ಆದರೆ, ಈ ಮೆಣಸಿನ ಬಣ್ಣ ದೀರ್ಘ ಸಮಯದ ತನಕ ಇರುವುದಿಲ್ಲ ಕೂಡ. ಬ್ಯಾಡಗಿ ಮಾರುಕಟ್ಟೆಯ ಮೂಲಗಳ ಪ್ರಕಾರ ಕನಿಷ್ಠ 70 ಮೆಣಸು ಮಾರಾಟಗಾರರು ಮಾರುಕಟ್ಟೆ ಸಮೀಪದ ವಿವಿಧ ಕೋಲ್ಡ್ ಸ್ಕೋರೇಜ್ ಗಳಲ್ಲಿ ಒಂದಿಷ್ಟು ಪ್ರಮಾಣದ ಗುಜಾರಾತ್ ಮೆಣಸುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಬ್ಯಾಡಗಿ ಮೆಣಸಿನ ಬೆಲೆಯಲ್ಲಿನ ದಿಢೀರ್ ಏರಿಕೆಯ ಲಾಭ ಪಡೆದ ಪುಷ್ಪ ಮೆಣಸಿನ ತಳಿ ಎಪಿಎಂಸಿ ಮಾರುಕಟ್ಟೆ ಮೂಲಕ ಪ್ರವೇಶಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ‌ವರದಿಗಳು ತಿಳಿಸಿವೆ.

Ad Widget . Ad Widget . Ad Widget .

ಬ್ಯಾಡಗಿ ಮೆಣಸಿನ ಮಾರುಕಟ್ಟೆ ತನ್ನದೇ ಆದ ಗುರುತು ಬೆಳೆಸಿಕೊಂಡಿದೆ. ಈ ಮಾರುಕಟ್ಟೆಡಬ್ಬಿ ಹಾಗೂ ಕಡ್ಡಿ ಮೆಣಸಿನ ತಳಿಗಳ ಮೇಲೆ ಆಧಾರಿತವಾಗಿದೆ ಕೂಡ. ಹಲವು ವರ್ಷಗಳಿಂದ ವಿವಿಧ ದೇಶಗಳು ಹಾಗೂ ಕಂಪನಿಗಳು ಬ್ಯಾಡಗಿ ಮೆಣಸನ್ನು ಖರೀದಿಸುತ್ತಿವೆ. ಹೀಗಿರುವಾಗ ಸ್ಥಳೀಯ ಮೆಣಸು ಮಾರುಕಟ್ಟೆಯ ಖ್ಯಾತಿಗೆ ಯಾವುದೇ ಹಾನಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ರಾಣಿಬೆನ್ನೂರು ತಾಲೂಕಿನ ರೈತ ರಾಮಣ್ಣ ಸುಡಂಬಿ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *